ಶಿರಸಿ: ಅಕ್ರಮವಾಗಿ ಮರ ಕಟಾವು... ಉದ್ಯಮಿ ಉಪೇಂದ್ರ ಪೈ ಮೇಲೆ ಪ್ರಕರಣ ದಾಖಲು.


*ಪಶ್ಚಿಮ ಘಟ್ಟ ವಾಯ್ಸ್ ಡೈಲಿ ನ್ಯೂಸ್*
 
ದಿನಾಂಕ 19 ರ ಬುಧವಾರದಂದು ತಾಲೂಕಿನ ಇಟಗುಳಿ ಗ್ರಾಮದ ಸರ್ವೆ ನಂಬರ್ 188 ರ ಬೆಟ್ಟ ಪ್ರದೇಶದಲ್ಲಿ ಅಕ್ರಮವಾಗಿ ಜಂಗ್ಲಿ ಮರಗಳನ್ನು ಕಡಿದಿರುವ ಕುರಿತಂತೆ ಶಿರಸಿ ಅರಣ್ಯ ವೃತ್ತದಲ್ಲಿ ಪ್ರಕರಣ ದಾಖಲಾಗಿದೆ.
 ಶಿರಸಿಯ ಜೆಡಿಎಸ್ ಮುಖಂಡ ಹಾಗೂ ಉದ್ಯಮಿಯಾಗಿರುವ ಉಪೇಂದ್ರ ಪೈ ಎಂಬುವವರ ಲಗ್ತ ಜಮೀನಿನ ಬೆಟ್ಟದಲ್ಲಿರುವ ಮರಗಳನ್ನು ಯಾವುದೇ ಅನುಮತಿ ಇಲ್ಲದೆ ಕಡಿದಿರುವ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ದಾಳಿ ನಡೆಸಿ ಮರಗಳನ್ನು ಬೇರೆಡೆಗೆ ಸಾಗಿಸದಂತೆ ತಕ್ಷಣವೇ ಕ್ರಮ
 ಕೈಗೊಂಡು ಉಪೇಂದ್ರ ಪೈ ವಿರುದ್ಧ ಪ್ರಕರಣ ದಾಖಲಿಸಿದೆ. ಪ್ರಕರಣ ನಂಬರ್ RO 25/25 ಆಗಿದ್ದು ಈಗಾಗಲೇ ಉಪೇಂದ್ರ ಪೈ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ನಂತರ ಸದ್ಯ ಇಲಾಖೆಗೆ ಬಾಂಡ್ ಪೇಪರ್ ಮೇಲೆ ಹೇಳಿಕೆ ದಾಖಲಿಸಿ ಅರಣ್ಯ ಇಲಾಖೆ ಬೇಲ್ (ಜಾಮೀನು) ಮೇಲೆ ಬಿಡುಗಡೆಯಾಗಿದ್ದಾರೆ ಎಂದು ತಿಳಿದು ಬಂದಿದೆ .
ಈ ನಡುವೆ ಇಂದು ಅರಣ್ಯ ಇಲಾಖೆ DRFO ಎಮ್. ಆರ್. ನಾಯ್ಕ್ ನೇತೃತ್ವದ ಅರಣ್ಯ ಸಿಬ್ಬಂದಿಗಳ ತಂಡ ಘಟನೆ ನಡೆದ ಸ್ಥಳಕ್ಕೆ ತೆರಳಿ ಅಕ್ರಮವಾಗಿ ಕಡಿದ ಮರದ ತುಂಡುಗಳನ್ನು ಸ್ಥಳದಿಂದ ಅರಣ್ಯ ಇಲಾಖೆ ಸಾಗಿಸುತ್ತಿದೆ ಎಂದು ತಿಳಿದುಬಂದಿದೆ.
  ಪ್ರಕರಣದ ವಿಚಾರಣೆ ನಡೆದಿದ್ದು ತನಿಖಾ ವರದಿಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (DFO) ಸಲ್ಲಿಸಿದ ನಂತರ ಪ್ರಕರಣದ ಸಂಪೂರ್ಣ ಹೂರಣ ಹೊರಗೆ ಬರಲಿದೆ.

PGK

Post a Comment

Previous Post Next Post