ಒಳ ಮೀಸಲಾತಿ ಆಳ ಮತ್ತು ಅಗಲ,
ಜಸ್ಟೀಸ್ ನಾಗಮೋಹನ್ ದಾಸ್ ಆಯೋಗವು ಎ,ಬಿ,ಸಿ,ಡಿ,ಇ ಎಂದು ಪ್ರವರ್ಗಗಳನ್ನಾಗಿ ವಿಭಾಗೀಕರಿಸಿ ಮಾಡಿದ್ದ ಶಿಫಾರಸ್ಸನ್ನ ಸಚಿವ ಸಂಪುಟ ಎ,ಬಿ,ಸಿ ಎಂದು ಮೂರು ಪ್ರವರ್ಗಗಳನ್ನಾಗಿ ವಿಭಾಗೀಕರಿಸಲು ಹಾಗೂ ಎಡಗೈ ಸಂಬ0ಧಿತ ಜಾತಿಗಳುಳ್ಳ ಎ ಪ್ರವರ್ಗಕ್ಕೆ - ಶೇ. 6, ಬಲಗೈ ಸಂಬಂಧಿತ ಜಾತಿಗಳುಳ್ಳ ಬಿ ಪ್ರವರ್ಗಕ್ಕೆ - ಶೇ. 6 ಹಾಗೇ ಸಿ ಪ್ರವರ್ಗಕ್ಕೆ - ಶೇ.5 ರಷ್ಟು ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೇ ಎಂದು ಸಿಎಂ ಸ್ಪಷ್ಟ ಪಡಿಸಿದ್ದಾರೆ.
ಮೀಸಲಾತಿ ಎಂದರೇನು??
ಇತಿಹಾಸದಲ್ಲಿ ನಡೆದಿರುವ ಅನ್ಯಾಯ & ಅದರಿಂದ ಅವಕಾಶ ವಂಚಿತರಾದವರಿಗೆ ನ್ಯಾಯ ಒದಗಿಸಲು ನಮ್ಮ ಸಂವಿಧಾನ ಕರ್ತೃಗಳು ಕಂಡುಕೊಂಡ್ ದಾರಿಯೆ ಮೀಸಲಾತಿ. ವಂಚಿತ ವರ್ಗಗಳಿಗೆ ಎಕರೀತಿಯಾಗಿ ಕೃಡಿಕರಿಷಿ ಮೀಸಲಾತಿ ನೀಡಲಾಗಿದೆ, ಆದರೇ ಕೆಲುವು ಸಮುದಾಯದಲ್ಲೆ ಇರುವ ನ್ಯೂನ್ಯತೆಗಳನ್ನು, ತಾರತಮ್ಯಗಳನ್ನು ಹೋಗಲಾಡಿಸಲು ಜನ ಸಂಖ್ಯೆ ಅನುಗುಣವಾಗಿ ಒಳಮೀಸಲಾತಿ ಸೃಷ್ಟಿಸಲಾಗಿದೆ. ಹಸಿವಿನಿಂದ ಒಬ್ಬ ಸಾಯುತ್ತಿರಲು
ನಮಗೆ ಊಟ ಸಿಕ್ಕಿದೆ ಎಂದು ಸಂಭ್ರಮಿಸುವುದು ಅಪರಾಧ ಮಾತ್ರವಲ್ಲಾ ಅದು ಪಾಪವೂ ಕೂಡ !
ಪಾಪ ಅಲೆಮಾರಿಗಳನ್ನು ನೆನೆಸಿಕೊಂಡಾಗ ದುಃಖವಾಗುತ್ತಿದೆ.🤔🥲🥲🥲 ಅಲೆಮಾರಿ ಸಮುದಾಯದ ಒಬ್ಬ ಸಹೋದರನ ನೋವಿನ ಮಾತುಗಳನ್ನು ಕೇಳಿ ನಿಜಕ್ಕೂ ಬೇಸರವಾಯ್ತು ಮನಸ್ಸು ಭಾರವಾಯ್ತು.. ಲಂಬಾಣಿ ಭೋವಿ ಸಮುದಾಯಗಳೊಂದಿಗೆ ಇಂಥಹ ಸಣ್ಣ ಸಣ್ಣ ಸೂಕ್ಷ್ಮ ಸಮುದಾಯಗಳನ್ನು ಅದರಲ್ಲೂ ಒಂದೇ ಒಂದು ಸರ್ಕಾರಿ ಹುದ್ದೆಯೂ ಪಡೆಯದ, ಒಂದೇ ಒಂದು PHD ಪಡೆಯದ ಮತ್ತು ಪದವೀಯನ್ನು ಹೊಂದದ ಮೀಸಲಾತಿಯಿಂದ ವಂಚಿತರಾದ ಸಮುದಾಯಗಳು ಕೂಡ ಈ 59 ಜಾತಿಗಳ ಪಟ್ಟಿಯಲ್ಲಿವೆ. ಸಾಮಾಜಿಕ ನ್ಯಾಯದ ದೃಷ್ಟಿಯಲ್ಲಿ ನೋಡಿದಾಗ ಇದು ನಿಜಕ್ಕೂ ಅನ್ಯಾಯ ಅನ್ನಿಸದೇ ಇರದು. ಇವರ ನೋವನ್ನು ಸಿದ್ದರಾಮಯ್ಯನವರು ಅರ್ಥ ಮಾಡಿಕೊಂಡು ಅತೀ ಹಿಂದುಳಿದ ಈ ಸಮುದಾಯಗಳಿಗೆ ಆದ ಈ ಅನ್ಯಾಯವನ್ನು ಸರಿಪಡಿಸುತ್ತಾರೆ ಎನ್ನುವ ನಂಬಿಕೆ ಇದೆ.. ಸಿದ್ಧರಾಮಯ್ಯ ಸಾಹೇಬ್ರೆ ಅಪಾರವಾದ ಗೌರವ ಇದೆ ಅಲೆಮಾರಿಗಳಿಗೆ ನ್ಯಾಯ ಸಲ್ಲಿಸೋಕೆ ನಿಮ್ಮಿಂದ ಮಾತ್ರ ಸಾಧ್ಯವಿದೆ ದಯಮಾಡಿ ಒಳಮೀಸಲಾತಿಗೆ ಸಂಬಂಧಪಟ್ಟಂತೆ ಅಲೆಮಾರಿ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಮುಂದುವರಿಯುತ್ತಿದೇ, ಅವರ ಮಾತು ಕೇಳಿದ್ರೆ ಕರಳು ಕಿತ್ಕೊಂಡ್ ಬರ್ತಿದೆ ಪಾಪ 🥲🥲 ಸಾಮಾಜಿಕ ನ್ಯಾಯ ಒದಗಿಸಿ ಅಲೇಮಾರಿ ಸಮುದಾಯಕ್ಕೆ ಈ ರೀತಿ ಅನ್ಯಾಯವಾಗುತ್ತೆ ಎಂದು ನಾವು ಅಂದುಕೊಂಡಿರಲಿಲ್ಲ....ರಾಜಕೀಯ ಲಾಭಕ್ಕೋಸ್ಕರ ಬಲಗೈ ಸಮಾಜ ಘಾತುಕರ ಮಾತನ್ನು ಕೇಳ್ಬೇಡಿ ಅತಂತ್ರ ಪರಿಸ್ಥಿತಿಯಲ್ಲಿ ತಳ ಸಮುದಾಯ ಇದೆ ದಯವಿಟ್ಟು ಅನ್ಯಾಯ ಮಾಡಬೇಡಿ ಮತ್ತೊಮ್ಮೆ ವರದಿಯನ್ನು ಪರಿಶೀಲಿಸಿ ಅವರಿಗೂ ನ್ಯಾಯ ಒದಗಿಸಿ 👏👏... ಭಾವುಕರಾಗಿ ಕಣ್ಣೀರು ಹಾಕುತ್ತಿರುವ ಸಹೋದರನ ನೋವು ಮತ್ತು ಕಣ್ಣೀರಿಗೆ ಮಿಡಿಯುತ್ತಲೇ ನಾನು ಹೇಳುವುದೇನೆಂದರೆ; ಮೀಸಲಾತಿ ಜಾರಿಯಾಗಿ 75 ವರ್ಷಗಳು ಕಳೆದರೂ ಒಂದು ಸರ್ಕಾರಿ ಹುದ್ದೆಯೂ ಇಲ್ಲದೇ, ತಲುಪಬೇಕಾದ ಯಾವ ಸೌಲಭ್ಯವೂ ತಲುಪದೇ SC ಪಟ್ಟಿಯಲ್ಲಿದ್ದೂ ಇಲ್ಲದಂತಾಗಿರುವ ನಿಮ್ಮ ನೋವು ಮತ್ತು ಸಂಕಟ ಖಂಡಿತ ನಮಗೆ ಅರ್ಥವಾಗುತ್ತದೆ, ಆದರೆ
ಇಲ್ಲಿ ಮೀಸಲಾತಿಯನ್ನು ಕಿತ್ತು ತಿನ್ನುವುದಾಗಲಿ, ಅಥವಾ ಕದ್ದು ತಿನ್ನುವುದಕ್ಕಾಗಲಿ ಸಾಧ್ಯವಿಲ್ಲ ಸಹೋದರ. ಕೆಲವು ವಿದ್ಯಾವಂತ ದಲಿತ ಬಂಧುಗಳೇ ಇಂಥಹ ಶಬ್ದಗಳನ್ನು ಪ್ರಯೋಗ ಮಾಡುತ್ತಿದ್ದಾರೆ ಅದು ತಪ್ಪು. ಸಾವಿರಾರು ವರ್ಷಗಳಿಂದ 100% ಮೀಸಲಾತಿಯ ಅನುಭವಿಸುತ್ತಾ ಬಂದಂಥಹ ಬಲಾಡ್ಯರ ವಿರುದ್ಧ ಹೋರಾಡಿ, ಗುದ್ದಾಡಿ ಬಾಬಾ ಸಾಹೇಬರು ಮೀಸಲಾತಿಯನ್ನು ಜಾರಿಗೊಳಿಸಿದರು. ಸಾಮಾಜಿಕವಾಗಿ ಹಿಂದುಳಿದಿರುವಿಕೆಗೆ ಮುಖ್ಯ ಕಾರಣ ಅಸ್ಪೃಶ್ಯತೆ ಮತ್ತು ಸಾಮಾಜಿಕ ಕಳಂಕ. ಆ ಕಾರಣಕ್ಕಾಗಿಯೇ ಅಸ್ಪೃಶ್ಯತೆಯಿಂದ ಬಳಲುತ್ತಿದ್ದ ಹೊಲೆ ಮಾದಿಗರೊಂದಿಗೆ ಸಾಮಾಜಿಕ ಕಳಂಕ ಹೊತ್ತಂತಹ ಲಂಬಾಣಿ, ಭೋವಿ, ಕೊರಚ, ಕೊರಮ ಮತ್ತು ಅನೇಕ ಅಲೆಮಾರಿ ಸಮುದಾಯಗಳನ್ನು ಕೂಡ SC ಪಟ್ಟಿಯಲ್ಲಿ ಸೇರಿಸಿ ಅವರಿಗೂ ಮೀಸಲಾತಿಯ ಸೌಲಭ್ಯ ನೀಡಿದರು.
ಅಕಸ್ಮಾತ್ ಲಂಬಾಣಿ ಭೋವಿ ಕೊರಚ ಕೊರಮ ಸಮುದಾಯಗಳು ನಮ್ಮ ಅವಕಾಶವನ್ನು ಕಿತ್ತು ಕದ್ದು ತಿಂದಿದ್ದಾರೆ ಎಂದು ಯಾರಾದರೂ ಆರೋಪಿಸುವುದಾದರೆ ನೀವು ಮೊದಲು ಬಾಬಾ ಸಾಹೇಬರನ್ನು ಆರೋಪಿಸಬೇಕಾಕುತ್ತದೆ. ಏಕೆಂದರೆ ಈ ಸಮುದಾಯಗಳ ಅಂದಿನ ಸಾಮಾಜಿಕ ಸ್ಥಿತಿಗತಿ ಮತ್ತು ಅವರ ಮೇಲೆ Criminal tribes act-1971 ಹೇರಲ್ಪಟ್ಟು, ಸಾಮಾಜಿಕ ಕಳಂಕಿತರಾಗಿದ್ದ ಕಾರಣಕ್ಕೆ ಮತ್ತು ದಮನಿತ ಸಮುದಾಯಗಳ ಸಾಮಾಜಿಕ ನ್ಯಾಯಕ್ಕಾಗಿ ನಾಲ್ವಡಿಯವರು ರಚಿಸಿದ 1921 ರ ಮಿಲ್ಲರ್ ಆಯೋಗದಲ್ಲಿ, ಈ ಸಮುದಾಯಗಳ ಸಾಮಾಜಿಕ ಸ್ಥಿತಿಗತಿಯನ್ನು ಸರ್ವೇ ಮಾಡಿದ ವರದಿಯ ಆಧಾರದ ಮೇಲೆ ಬಾಬಾ ಸಾಹೇಬರು 1951ರಲ್ಲಿ ಜಾರಿಗೊಳಿಸಿದ ಸಂವಿಧಾನದ ಮೂಲಕ ಮೀಸಲಾತಿಯನ್ನು ನೀಡಿದ್ದರು. ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಲ್ಪಟ್ಟ ಎಲ್ಲಾ ಜಾತಿಗಳೂ ಆ ಸಮಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಹಾಗೂ ರಾಜಕೀಯ ಪ್ರಾತಿನಿಧ್ಯದಿಂದ ಸಂಪೂರ್ಣವಾಗಿ ವಂಚಿತರಾಗಿದ್ದರು.
ಆ ಸಮಯಕ್ಕೆ ಈ ಎಲ್ಲಾ ಜಾತಿಗಳೂ ಕೂಡ ಸಮಾನವಾಗಿ ತುಳಿತಕ್ಕೊಳಪಟ್ಟವರಾಗಿದ್ದರು ಎನ್ನುವುದು ಐತಿಹಾಸಿಕ ಸತ್ಯ. ಬಾಬಾ ಸಾಹೇಬರು ಪರಿಶಿಷ್ಟ ಜಾತಿಗಳಿಗಷ್ಟೇ ಅಲ್ಲ
ಪ.ಪಂಗಡ, ಮಹಿಳೆ, ಧಾರ್ಮಿಕ ಅಲ್ಪಸಂಖ್ಯಾತ,
ಹಿಂದುಳಿದ ಎಲ್ಲಾ ಜಾತಿಗಳಿಗೂ ಮೀಸಲಾತಿಯನ್ನು ನೀಡಿದ್ದಾರೆ. ಅತೀ ಹಿಂದುಳಿದ ಮತ್ತು ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದ ಪರಿಶಿಷ್ಟ ಜಾತಿಗೆ 15% ಮೀಸಲಾತಿಯನ್ನು ನೀಡಿದರು. ಅಂದ್ರೆ ಇತರರಿಗಿಂತ ಸ್ವಲ್ಪ ಹೆಚ್ಚು ಅಷ್ಟೇ. ಮೀಸಲಾತಿ ನೀಡಿರುವುದೇ ಅದನ್ನು ಮೆಟ್ಟಿಲಾಗಿಸಿಕೊಂಡು ಮೇಲೆ ಬಂದು ಸಬಲೀಕರಣಗೊಳ್ಳಿ ಎಂದು. ಮೀಸಲಾತಿ ಅಡಿಯಲ್ಲಿ ಶಿಕ್ಷಣ ಪಡೆಯುವುದಕ್ಕೆ ಮತ್ತು ಉದ್ಯೋಗ ಗಿಟ್ಟಿಸಿಕೊಳ್ಳುವುದಕ್ಕೆ ಸ್ಪರ್ಧೆಯಲ್ಲಿ ಎಲ್ಲರಿಗೂ ಸಮಾನ ಅವಕಾಶ ಇರುವಾಗ ಯಾರು ಉತ್ತಮ ಅಂಕ ಪಡೆದಿರುತ್ತಾರೋ ಅವರಿಗೆ ಉದ್ಯೋಗ ಸಿಗುತ್ತದೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಮುಂದೆ ಬಂದವರನ್ನು
ಇವರು ನಮ್ಮ ಅವಕಾಶ ಕಿತ್ತುಕೊಂಡಿದ್ದಾರೆ, ಕದ್ದು ತಿಂದಿದ್ದಾರೆ, ನಮಗೆ ಮೋಸ ಮಾಡಿದ್ದಾರೆ ಎನ್ನುವುದರಲ್ಲಿ ಅರ್ಥವಿದೆಯೇ? ಅಕಸ್ಮಾತ್ ಲಂಬಾಣಿ ಭೋವಿಗಳು ಎಲ್ಲಾ ಅವಕಾಶಗಳನ್ನು ಕಿತ್ತುಕೊಂಡಿದ್ದಾರೆ ಎಂದಾಗಿದ್ದಲ್ಲಿ ರಾಜ್ಯವೊಂದರಲ್ಲೇ ಕೇವಲ SC ಗಳಲ್ಲೇ 1.5 ಲಕ್ಷ ಬ್ಯಾಕ್ ಲಾಗ್ ಹುದ್ದೆಗಳು ಯಾಕೆ ಹಾಗೆಯೇ ಉಳಿದಿವೆ?.. ಕಿತ್ತು, ಕದ್ದು ತಿಂದಿದ್ದಾರೆ ಎನ್ನುವ ಆರೋಪಕ್ಕಾಗಿ ಇದನ್ನು ವಿವರಿಸಬೇಕಾಯಿತು.
ಒಬ್ಬ ಅಂಬೇಡ್ಕರ್ವಾದಿಯಾಗಿ ಸಾಮಾಜಿಕ ನ್ಯಾಯದ ದೃಷ್ಟಿಕೋನದಲ್ಲಿ ನೋಡುವಾಗ ಒಳಮೀಸಲಾತಿ ಖಂಡಿತ ಅಗತ್ಯವಿದೆ. ಹಾಗೆಯೇ ಒಳಮೀಸಲಾತಿ ಜಾರಿಗೊಳಿಸುವಾಗ ಎಲ್ಲಾ ಸಮುದಾಯಗಳ ಅಧ್ಯಯನ ಮಾಡಿ, ಜಾತಿಗಣತಿ ನಡೆಸಿ, ಎಂಪಿರಿಕಲ್ ದತ್ತಾಂಶ ಸಂಗ್ರಹಿಸಿ ವೈಜ್ಞಾನಿಕವಾಗಿ ಹಂಚಿಕೆ ಮಾಡಿ ಎಂದು ಹೇಳಿದವರನ್ನು ಸಾಮಾಜಿಕ ನ್ಯಾಯದ ವಿರೋಧಿಗಳು ಎಂದು ಬಿಂಬಿಸದೇ ಮತ್ತು ಈ ಬಿಕ್ಕಟ್ಟುಗಳ ನಡುವೆಯೂ ಸಮುದಾಯಗಳ ಐಕ್ಯತೆ ಕಾಪಾಡಿಕೊಂಡು ಹೋಗುವುದೇ ನಿಜವಾದ ಸವಾಲು, ಮತ್ತು ಅದೇ ನಿಜವಾದ ದಲಿತತ್ವ ಮತ್ತು ಅಂಬೇಡ್ಕರ್ ವಾದ ಕೂಡ..
ಇದೆಲ್ಲದರ ಹೊರತಾಗಿಯೂ ನಾವು 101 ಸಮುದಾಯಗಳು ಒಗ್ಗಟ್ಟಾಗೋಣ,
ನಮ್ಮ ಒಟ್ಟು ಜನಸಂಖ್ಯೆಯ ಆಧಾರದಲ್ಲಿ ನಮಗೆ ಸಿಗಬೇಕಾದ 22% ಮೀಸಲಾತಿಗಾಗಿ ಹೋರಾಟ ಮಾಡೋಣ. ಮೀಸಲಾತಿಯ ಆಶಯಕ್ಕೆ ವಿರುದ್ಧವಾದ EWS ವಿರುದ್ಧ ದೊಡ್ಡಮಟ್ಟದ ಚಳುವಳಿಯನ್ನು ರೂಪಿಸೋಣ. ಮತ್ತು ಮುಖ್ಯವಾಗಿ ನಮ್ಮ 101 ಸಮುದಾಯಗಳಿಗೆ ಯಾವುದೋ ಮನುವಾದಿ ದೊಣ್ಣೆನಾಯಕರ ಮಧ್ಯಸ್ಥಿಕೆ ಬೇಕಾಗಿಲ್ಲ ಎಂದು ಕೂಗಿ ಹೇಳೋಣ...
ಜೈ ಭೀಮ್. ಜೈ ಸೇವಾಲಾಲ್, ಜೈ ಸಂವಿಧಾನ. ಜೈ ಭಾರತ್🇮🇳✍️📚👏
#ಒಳಮೀಸಲಾತಿ
#reservation
#Siddaramaiah
#ChiefMinisterofKarnataka