ಕಾಫಿನಾಡ ಮಲೆನಾಡು ಭಾಗದಲ್ಲಿ ಕಾಡಾನೆ ಭೀತಿ ಮುಂದುವರಿದಿದೆ. ಎನ್.ಆರ್.ಪುರ ತಾಲೂಕಿನ ಹಳೇಹಳ್ಳಿ ಸಮೀಪ ಕಾಡಾನೆ ಪ್ರತ್ಯಕ್ಷವಾಗಿ ಜನರಲ್ಲಿ ಮತ್ತೊಮ್ಮೆ ಆತಂಕ ಉಂಟು ಮಾಡಿದೆ.
ಬಾಳೆಹೊನ್ನೂರು-ಎನ್.ಆರ್.ಪುರ ಸಂಪರ್ಕದ
ರಾಜ್ಯ ಹೆದ್ದಾರಿಯಲ್ಲಿ ಒಂಟಿ ಸಲಗ ಕಂಡು ಪ್ರಯಾಣಿಕರು ಕಂಗಾಲು ಆಗಿದ್ದಾರೆ. ಒಂಟಿ ಸಲಗ ಕಂಡು ವಾಹನ ಸವಾರರು, ಸ್ಥಳೀಯರಲ್ಲಿ ಆತಂಕಗೊಂಡಿದ್ದಾರೆ.
ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ಭಾಗದಲ್ಲಿ ನಿರಂತರ ಕಾಡಾನೆಗಳ ಓಡಾಟದಿಂದ ಸ್ಥಳಿಯರು ಕಂಗಾಲಾಗಿದ್ದಾರೆ.
ಕಾಡಾನೆ ಸ್ಥಳಾಂತರಕ್ಕೆ ಹಲವು ಬಾರಿ ಸ್ಥಳೀಯರು ಮನವಿ ಮಾಡಿದ್ದಾರೆ.
ವರದಿ: ಮಣಿಕಂಠ ಚಿಕ್ಕಮಂಗಳೂರು