*Western Ghat voice daily news* ಕಾರವಾರ-ಬ್ರಿಟಿಷರು ದಾಸ್ಯದಿಂದ ದೇಶವನ್ನು ಸ್ವಾತಂತ್ರö್ಯಗೊಳಿಸಲು ಹಲವಾರು ಮಹನೀಯರ ತಮ್ಮ ಬಲಿದಾನ ನೀಡಿದ್ದು, ಅವರ ಬಲಿದಾನದ ಫಲವಾಗಿ ಇಂದು ದೇಶದ ಜನರು ನೆಮ್ಮದಿ ಜೀವನ ಸಾಗಿಸಲು
ಸಾಧ್ಯವಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.
ಅವರು ಶುಕ್ರವಾರ ಕಾರವಾರದ ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ 79 ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರೆವೇರಿಸಿ ಮಾತನಾಡಿದರು.ದೇಶದಾದ್ಯಂತ ಹಲವು ಮಹನೀಯರ ಬಲಿದಾನದಿಂದಾಗಿ ಇಂದು ಸ್ವಾತಂತ್ರೋತ್ಸವವನ್ನು ಆಚರಿಸಲು ಸಾಧ್ಯವಾಗಿದೆ.
ವೀರರಾಣಿ ಕಿತ್ತೂರ ರಾಣಿ ಚನ್ನಮ್ಮ, ಝಾನ್ಸಿ ರಾಣಿ ಲಕ್ಷಿö್ಮÃಬಾಯಿ ಸೇರಿದಂತೆ ಅನೇಕ ಮಹನೀಯರು ಸ್ವಾತಂತ್ರö್ಯಕ್ಕಾಗಿಬ್ರಿಟಿಷರೊಂದಿಗೆ ಹೋರಾಡಿ ವೀರ ಮರಣ ಹೊಂದಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ ಹಾಗೂ ರಾಷ್ಟçಪಿತ ಮಹಾತ್ಮ
ಗಾಂಧೀಜಿಯ ಅಹಿಂಸೆ ಮತ್ತು ಅಸಹಕಾರ ತತ್ವಗಳಿಂದ ಕೂಡಿದ ಚಳುವಳಿಗಳ ಮೂಲಕ ದೇಶದ ಇತಿಹಾಸ ಇಡೀ ಪ್ರಪಂಚಕ್ಕೆಮಾದರಿಯಾಗಿದೆ ಎಂದರು.