*ಪಶ್ಚಿಮ ಘಟ್ಟ ವಾಯ್ಸ್ ಡೈಲಿ ನ್ಯೂಸ್* ಧರ್ಮಸ್ಥಳ ಪ್ರಕರಣ: ಪಾಯಿಂಟ್ 13ರಲ್ಲಿ ಮುಂದುವರಿದ ಕಾರ್ಯಾಚರಣೆ.

*ಪಶ್ಚಿಮ ಘಟ್ಟ ವಾಯ್ಸ್ ಡೈಲಿ ನ್ಯೂಸ್*
ಬೆಳ್ತಂಗಡಿ: ಸಾಕ್ಷಿ ದೂರುದಾರ ತೋರಿಸಿದ 13ನೆಯ ಗುರುತಿನಲ್ಲಿ ಬುಧವಾರ ಅಗೆಯುವ ಕಾರ್ಯಾಚರಣೆ ನಡೆಯುತ್ತಿದ್ದು, ಭಾರೀ ಮಳೆಯಿಂದಾಗಿ ಕಾರ್ಯಾಚರಣೆ ನಿಧಾನವಾಗಿ ನಡೆಯುತ್ತಿದೆ.

13ನೆಯ ಸ್ಥಳದಲ್ಲಿ ಮಂಗಳವಾರ ಅಗೆಯುವ ಕಾರ್ಯ ನಡೆಸಿದ್ದ ಸ್ಥಳದ ಪಕ್ಕದಲ್ಲಿಯೇ ಇದೀಗ ಸಾಕ್ಷಿ ದೂರುದಾರ ಮತ್ತೊಂದು ಸ್ಥಳವನ್ನು ಗುರುತಿಸುವ ಕಾರ್ಯವನ್ನು ಮಾಡಿದ್ದು ಅಲ್ಲಿ ಎರಡು ಹಿಟಾಚಿಗಳನ್ನು ಉಪಯೋಗಿಸಿ ಅಗೆಯುವ ಕಾರ್ಯ ಮಾಡಲಾಗುತ್ತಿದೆ.

ಇಂದಿನ ಕಾರ್ಯಾಚರಣೆ ಅತ್ಯಂತ ಮಹತ್ವದ್ದಾಗಿದ್ದು, ಇಂದು ಯಾವುದೇ ಕುರುಹುಗಳು ಪತ್ತೆಯಾಗದಿದ್ದಲ್ಲಿ ತಾತ್ಕಾಲಿಕವಾಗಿ ಅಗೆಯುವ ಕಾರ್ಯಾಚರಣೆಯನ್ನು ನಿಲ್ಲಿಸಿ ತನಿಖೆಯನ್ನು ಬೇರೆ ರೀತಿಯಲ್ಲಿ ನಡೆಸುವ ಬಗ್ಗೆ ಚಿಂತನೆ ನಡೆಯುತ್ತಿದೆ.
PGK

Post a Comment

Previous Post Next Post