*ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್* E Khata: ಇ ಖಾತಾದ ಉಪಯೋಗ ಆಸ್ತಿದಾರರಿಗಿಂತ ಸರ್ಕಾರಕ್ಕೆ ಹೆಚ್ಚು! ಸಿಕ್ಕಿಬಿದ್ದ ಆಸ್ತಿ ಕಳ್ಳರು!

*ಪಶ್ಚಿಮಘಟ್ಟ  ವಾಯ್ಸ್ ಡೈಲಿ ನ್ಯೂಸ್*E Khata: ಕರ್ನಾಟಕ ಸರ್ಕಾರವು ಆಸ್ತಿ ಖರೀದಿ ಹಾಗೂ ಮಾರಾಟದಲ್ಲಿ ಯಾವುದೇ ಲೋಪವಾಗಬಾರದು ಎನ್ನುವ ಕಾರಣಕ್ಕೆ ಇ ಖಾತಾ ಸೇವೆಯನ್ನು ಪರಿಚಯಿಸಿದೆ. ಆದರೆ ಇ ಖಾತಾದ ಉಪಯೋಗವು ಆಸ್ತಿದಾರರಿಗಿಂತಲೂ ಇದೀಗ ಸರ್ಕಾರಕ್ಕೆ ಹೆಚ್ಚು ಲಾಭವನ್ನು ತಂದುಕೊಟ್ಟಿದೆ ಎನ್ನುವ ವಿಷಯವು ಬಹಿರಂಗವಾಗಿದೆ. ಇದಕ್ಕೆ ಉದಾ: ಬೆಂಗಳೂರಿನ ಪ್ರಮುಖ ಆಸ್ತಿದಾರರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ನೋಟಿಸ್ ನೀಡುತ್ತಿರುವುದು. ಇ ಖಾತಾ ಪಡೆದಿರುವುದರಿಂದ ಆಸ್ತಿ ಖರೀದಿ ಹಾಗೂ ಮಾರಾಟದಲ್ಲಿನ ಸಮಸ್ಯೆಗಳು ಪರಿಹಾರವಾಗಿದೆ.
ಆದರೆ ಇದೇ ಸಂದರ್ಭದಲ್ಲಿ ಸುಳ್ಳು ದಾಖಲೆಗಳನ್ನು ನೀಡಿದ್ದ ಹಾಗೂ ಕಡಿಮೆ ಆಸ್ತಿ ವಿಸ್ತೀರ್ಣತೆಯನ್ನು ಘೋಷಿಸಿಕೊಂಡಿದ್ದ ಆಸ್ತಿದಾರರಿಗೆ ಶಾಕ್ ಎದುರಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇ - ಖಾತಾ ಮಾಡಿಸಿಕೊಂಡಿರುವವರ ಆಸ್ತಿಯನ್ನು ಕಾವೇರಿ ತಂತ್ರಾಂಶ ಹಾಗೂ ಮಾರಾಟವನ್ನು ನೋಡಿ ಅದರ ವಿಸ್ತೀರ್ಣವನ್ನು ತಪ್ಪಾಗಿ ನಮೂದಿಸಲಾಗಿದೆ ಎಂದು ನೋಟಿಸ್ ನೀಡುವುದಕ್ಕೆ ಪ್ರಾರಂಭಿಸಿದೆ. ಈ ಶಾಕ್ ಅನ್ನು ಬೆಂಗಳೂರಿನ ಕೆಲವು ಆಸ್ತಿದಾರರು ನಿರೀಕ್ಷೆ ಮಾಡಿರಲಿಲ್ಲ. ಆದರೆ ಆಸ್ತಿದಾರರು ಸಹ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಬಿಬಿಎಂಪಿಯ ಅಧಿಕಾರಿಗಳು ತಪ್ಪಾಗಿ ನೋಟಿಸ್ ಜಾರಿ ಮಾಡುತ್ತಿದ್ದಾರೆ.
ಅಪಾರ್ಟ್‌ಮೆಂಟ್‌ಗಳಲ್ಲಿನ ಕಾರು ಪಾರ್ಕಿಂಗ್ ಪ್ರದೇಶ ಹಾಗೂ ಇನ್ಳುಳಿದ ಸೌಕರ್ಯಗಳ ಜಾಗವನ್ನೂ ತಪ್ಪಾಗಿ ಲೆಕ್ಕಹಾಕಲಾಗಿದ್ದು ತೆರಿಗೆ ವಿಧಿಸಲಾಗಿದೆ ಎಂದು ದೂರಿದ್ದಾರೆ. ಬೆಂಗಳೂರಿನಲ್ಲಿ ಕಳೆದ 10 ವರ್ಷಗಳ ಮುಂಚೆ ಆಯಾ ಆಸ್ತಿದಾರರಿಗೇ ಸ್ವಯಂ ಆಸ್ತಿ ಘೋಷಣೆ ಯೋಜನೆಯ ಅಡಿಯಲ್ಲಿ ಆಸ್ತಿ ಘೋಷಣೆ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿತ್ತು.

Skip
D K Shivakumar | ಇದು ನವೆಂಬರ್ ಸಂದೇಶದ ಮೊದಲ ಭಾಗ.?
ಅಂದರೆ, ಉದಾ ಮನೆಯ ಒಟ್ಟಾರೆ ವಿಸ್ತೀರ್ಣ ಹಾಗೂ ಆಸ್ತಿಯ ಒಟ್ಟು ವಿಸ್ತೀರ್ಣ ಎಷ್ಟಿದೆ ಎಂದು ಆಸ್ತಿದಾರರೇ ಖುದ್ದು ದಾಖಲಿಸಿಕೊಳ್ಳಬಹುದಾಗಿತ್ತು. ಅಲ್ಲದೇ ಈ ವಿಸ್ತೀರ್ಣದ ಆಧಾರದ ಮೇಲೆ ಬಿಬಿಎಂಪಿಯು ಆಸ್ತಿದಾರರಿಗೆ ತೆರಿಗೆ ವಿಧಿಸುತ್ತಿತ್ತು. ಆದರೆ, ಆ ಸಂದರ್ಭದಲ್ಲಿ ಆಸ್ತಿದಾರರು ತಪ್ಪಾಗಿ ಆಸ್ತಿ ವಿಸ್ತೀರ್ಣತೆ ಘೋಷಿಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ವಿಚಾರವಾಗಿ ಪಾಲಿಕೆಯ ಮಾಸಿಕ ಸಭೆಗಳಲ್ಲೂ ಚರ್ಚೆಯಾಗಿತ್ತು. ಅಲ್ಲದೇ ಇದಕ್ಕಾಗಿ ವಿಶೇಷ ತಂಡಗಳನ್ನೂ ರಚಿಸಲಾಗಿತ್ತು. ಅಂತಿಮವಾತಿ ಇ ಖಾತಾದಿಂದ ಈ ಲೋಪಗಳನ್ನು ಸುಲಭವಾಗಿ ಪತ್ತೆ ಮಾಡುವುದಕ್ಕೆ ಸಾಧ್ಯವಾಗುತ್ತಿದೆ.
ಈ ಹಿಂದೆ ತಪ್ಪಾಗಿ ಅಥವಾ ನಿಖರ ಮಾಹಿತಿಯನ್ನು ನೀಡದೆ ಆಸ್ತಿ ತೆರಿಗೆ ವಂಚನೆ ಮಾಡಿರುವ ಆಸ್ತಿದಾರರು ಸಿಕ್ಕಿಬಿದ್ದಿದ್ದು. ಈ ರೀತಿ ಸ್ವಯಂ ಆಸ್ತಿ ಘೋಷಣೆಯಲ್ಲಿ ತಪ್ಪು ಮಾಡಿರುವ ಆಸ್ತಿದಾರರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ನೋಟಿಸ್ ಜಾರಿ ಮಾಡುತ್ತಿದ್ದಾರೆ.
PGK

Post a Comment

Previous Post Next Post