*ಪ್ರಥ್ವಿರಾಜ ನ್ಯೂಸ್*
*
*ಕಾರವಾರ* ':ನಗರದಲ್ಲಿ ಜುಲೈ 20, 2025ರಂದು ಸುರಿದ ಭಾರೀ ಮಳೆಯಿಂದಾಗಿ ಪಿಕಳೆ ಆಸ್ಪತ್ರೆ ಬಳಿ ನಿಲ್ಲಿಸಿದ್ದ ಕಾರಿನ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದ ಘಟನೆ ನಡೆದಿದೆ. ಈ ದುರಂತದಲ್ಲಿ ಮಲ್ಲಾಪುರ ಮೂಲದ ಲಕ್ಷ್ಮೀ ನಾರಾಯಣ ಮಮ್ತೆಕರ (55) ಎಂಬ ಮಹಿಳೆ ಸಾವನ್ನಪ್ಪಿದ ಧಾರುಣ ಘಟನೆ ಸಂಭವಿಸಿದೆ. ಲಕ್ಷ್ಮೀ, ತಮ್ಮ ಗರ್ಭಿಣಿ ಸೊಸೆಯನ್ನು ತಪಾಸಣೆಗಾಗಿ ಕಾರವಾರ ಜಿಲ್ಲಾಸ್ಪತ್ರೆಗೆ ಕರೆದು ಕೊಂಡು ಬಂದಿದ್ದರು. ಸೊಸೆ ಆಸ್ಪತ್ರೆಯೊಳಗೆ ತಪಾಸಣೆಗೆ ತೆರಳಿದ್ದಾಗ, ಕಾರಿನಲ್ಲಿ ಕುಳಿತಿದ್ದ ಲಕ್ಷ್ಮೀ ಮೇಲೆ ಮರ ಬಿದ್ದಿದ್ದು, ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಗರ್ಭಿಣಿ ಸೊಸೆ ಸುನಿತಾ ಮತ್ತು ಕಾರು ಚಾಲಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಡಿಸಿ ಮತ್ತು ನಗರಸಭೆ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದರು.