*ಪಶ್ಚಿಮ ಘಟ್ಟ ವಾಯ್ಸ್ ಡೈಲಿ ನ್ಯೂಸ್* ಕುಮಟಾ :ತಾಲೂಕಿನ ಅಘನಾಶಿನಿ ನದಿಯ ಮೇಲಿನ ಮಿರ್ಜಾನ ಸಮೀಪ ಇರುವ ರೈಲ್ವೆ ಸೇತುವೆ ಬಳಿ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಕೇರಳದ ತ್ರಿಶೂರು ಜಿಲ್ಲೆಯ ವೆಲ್ಲಿಕುಲಂಗರ ನಿವಾಸಿ, 56 ವರ್ಷದ ಬೇಬಿ ಥಾಮಸ್ ಪರಕಡನ್ ಎಂದು ಗುರುತಿಸಲಾಗಿದೆ. ಎರನಾಕುಲಂನಿಂದ ಮುಂಬೈಗೆ ತೆರಳುತ್ತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಿಂದ ಆಯತಪ್ಪಿ ಬಿದ್ದ ಪರಿಣಾಮವಾಗಿ, ರೈಲ್ವೇ ಹಳಿಯ ಕೆಳಗಿರುವ ಜಲ್ಲಿಕಲ್ಲುಗಳಿಗೆ ತಲೆ ತಾಗಿ, ತಲೆ ಒಡೆದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಮಿರ್ಜಾನ ರೈಲ್ವೆ ಸ್ಟೇಷನ್ ಟ್ರಾಕ್‌ಮೆನ್, ಅವರು ಪೊಲೀಸರಿಗೆ ದೂರು ನೀಡಿದ್ದಾರೆ ಕುಮಟಾ ಪೋಲೀಸರು ಸ್ಥಳಕ್ಕಾಗಮಿಸಿ ಕ್ರಮ ಕೈಗೊಂಡಿದ್ದಾರೆ.
ಮೃತರ ಬಳಿ ಮೂರು ಚಿನ್ನದ ಸರಗಳು, ರೂ. 3980 ನಗದು ಮತ್ತು ಒಂದು ವಾಚ್ ಇದ್ದು, ಇವರ ಇಬ್ಬರು ಮಕ್ಕಳು ಕೂಡ ಇದೇ ಟ್ರೈನ್ ನಲ್ಲಿ ಸಂಚರಿಸುತ್ತಿದ್ದರು ಎನ್ನಲಾಗಿದೆ.ರಾತ್ರಿ ವೇಳೆ ಬಂಗಾರದ ಚೈನ್ ಯಾರಾದರು ಕಳುವು ಮಾಡಬಹುದು ಎನ್ನುವ ಉದ್ದೇಶದಿಂದ ಚೈನ್ ತನ್ನ ಪರ್ಸನಲ್ಲಿ ಇಟ್ಟುಕೊಂಡಿದ್ದ.ಇವೆಲ್ಲವೂ ಕುಮಟಾ ಪೋಲೀಸರಿಗೆ ದೊರೆತಿದ್ದು, ಮೃತನ ಮನೆಯವರಿಗೆ ಹಿಂತಿರುಗಿಸಿದ್ದಾರೆ.
ರೈಲ್ವೆ ಹಳಿಯ ಮೇಲೆ ಬಿದ್ದ ಮೃತ ದೇಹವನ್ನು ರಸ್ತೆಗೆ ತರುವುದು ಅಷ್ಟು ಸುಲಭವಾಗಿರಲಿಲ್ಲ.ರಾತ್ರಿ ಸಮಯದಲ್ಲಿ ಅಂಬ್ಯಲೆನ್ಸ ಚಾಲಕರಾದ ಉಲ್ಲಾಸ ಮತ್ತು ನಚಿಕೇತ ಎಂಬುವವರು ಶವವನ್ನು ಒಂದು ಕಿ.ಮಿ ಹೊತ್ತಿ ಸಾಗಿ ಅಲ್ಲಿಂದ ವಾಹನದ ಮೇಲೆ ಸರಕಾರಿ ಆಸ್ಪತ್ರೆಗೆ ತರುವಲ್ಲಿ ಸಹಕಾರಿಯಾಗಿದ್ದಾರೆ.