*ಶಿರಸಿ* ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ ಮಾಡುತಿದ್ದ ಎರಡು ಮಿನಿ ಟಿಪ್ಪರ್ ವಾಹನ ಗಳನ್ನು ಶಿರಸಿ ಗ್ರಾಮೀಣ ಠಾಣೆ ಪಿಎಸ್ಐ ಸಂತೋಷಕುಮಾರ ಇಂದು ಬೆಳಿಗ್ಗೆ (ಜುಲೈ 21)ವಶಕ್ಕೆ ಪಡೆದಿದ್ದಾರೆ.ಸಿದ್ದಾಪುರ ದಿಂದ ಶಿರಸಿ ಕಡೆಗೆ ಬರುತ್ತಿದ್ದಾಗ ತಡೆದು ಚಾಲಕರುಗಳಾದ ಕಿರಣ್ ಅನಿಲ್ ಪೂಜಾರಿ (21) ಸಾ - 16 ನೇ ಮೈಲುಕಲ್ಲ ಪೋಸ್ಟ್ - ಸಂಪಗೋಡ ತಾ - ಸಿದ್ದಾಪುರ,ದೀಪಕ ಶೇಖರ ನಾಯ್ಕ್ (28) ಸಾ- 16 ನೇ ಮೈಲುಕಲ್ಲು ಪೋಸ್ಟ್- ಸಂಪಗೋಡ್ ತಾ- ಸಿದ್ದಾಪುರ ಇವರುಗಳ ಮೇಲೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.