ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ 766-ಇ ರಸ್ತೆಯಲ್ಲಿರುವ ಬೆಣ್ಣೆ ಹೊಳೆ ಸೇತುವೆ ಕಾಮಗಾರಿಯನ್ನು ಶ್ರೀ ಕೃಷ್ಣ ಬೈರೇಗೌಡ, ಮಾನ್ಯ ಕಂದಾಯ ಸಚಿವರು, ಕರ್ನಾಟಕ ಸರ್ಕಾರ ರವರರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಂಕಾಳ ವೈದ್ಯ, ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಭೀಮಣ್ಣ ನಾಯ್ಕ, ಶ್ರೀಮತಿ ಕೆ. ಲಕ್ಮೀಪ್ರಿಯಾ ಮಾನ್ಯ ಜಿಲ್ಲಾಧಿಕಾರಿಗಳು ಉ.ಕ ಕಾರವಾರ, ಶ್ರೀ ಪಟ್ಟರಾಜ ಗೌಡ ತಹಶೀಲ್ದಾರ ಶಿರಸಿ, ತಾಲೂಕು ಪಂಚಾಯತ ಅಧಿಕಾರಿಗಳು, ಆರ್‌ಎನ್ಎಸ್ ಅಧಿಕಾರಿಗಳು, ಬಂಡಲ ಪಂಚಾಯತ ಅಧ್ಯಕ್ಷರು ಉಪಾಧ್ಯಕ್ಷರು, ಗ್ರಾಮಸ್ಥರು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮುಂತ್ತಾದವರು ಉಪಸ್ಥಿತರಿದ್ದರು.