*ಶಿರಸಿ*:ತಾಲೂಕಿನ ಬೈರುಂಬೆ ಸಮೀಪದ ರೆಸಾರ್ಟ್ ಒಂದರಲ್ಲಿ ಭರ್ಜರಿಯಾಗಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆಯ ಮೇಲೆ ಭರ್ಜರಿಯಾಗಿ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ. ಲಕ್ಷಾಂತರ ಹಣ ಪಣಕ್ಕಿಟ್ಟು ಇಲ್ಲಿ ದೊಡ್ಡ ರೀತಿಯಲ್ಲಿ ಇಸ್ವೀಟ್ ಆಟ ನಡೆಯುತ್ತಿತ್ತು ಎಂದು ಹೇಳಲಾಗಿದೆ.ಶಿರಸಿ ಡಿಎಸ್‌ಪಿ ಶ್ರೀಮತಿ ಗೀತಾ ಪಾಟೀಲ್ ನೇತ್ರತ್ವದಲ್ಲಿ ಜುಲೈ 23 ಸಂಜೆ 5:00 ಗಂಟೆಗೆ ದಾಳಿ ನಡೆದಿದ್ದು 4 ಕಾರು ಹಾಗೂ ಇಲ್ಲಿ ಇಸ್ಪೀಟ್ ಆಡುತ್ತಿದ್ದ 19 ಜನರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಹೇಳಲಾಗುತ್ತಿದೆ. ಹಾವೇರಿ ವೈದ್ಯನೊಬ್ಬ ಈ ರೆಸಾರ್ಟ್ ಮಾಲೀಕ ಎನ್ನಲಾಗುತ್ತಿದೆ.ಈ ಜೂಜಾಟದಲ್ಲಿ 50ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರೆಂದೂ ದಾಳಿಯ ಸಮಯಕ್ಕೆ ಬಹಳ ಮಂದಿ ಪರಾರಿ ಆಗಿದ್ದಾರೆಂದೂ, ಲಕ್ಷಾಂತರ ರೂ ನಗದು ವಶಪಡಿಸಿಕೊಳ್ಳಲಾಗಿದೆ ಎಂದೂ ತಿಳಿದು ಬಂದಿದೆ.ಬಂದಿತರು -ಪರಾರಿ ಆದವರೆಲ್ಲ ದೊಡ್ಡ ಉದ್ಯಮಿಗಳು,ರಿಯಲ್ ಎಸ್ಟೇಟ್ ಉದ್ಯಮಿಗಳು ಎನ್ನಲಾಗುತ್ತಿದೆ. ಒಂದೊಂದು ಕಾರುಗಳ ಬೆಲೆಯೇ 20 ರಿಂದ 30 ಲಕ್ಷಗಳ ಬೆಲೆ ಬಾಳುತ್ತೆ ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.ಪೊಲೀಸ್ ಕ್ರಮ ಜಾರಿಯಲ್ಲಿದ್ದು ಹೆಚ್ಚಿನ ವಿವರ ತಿಳಿದು ಬರಬೇಕಿದೆ.