*ಪಶ್ಚಿಮ ಘಟ್ಟ ವಾಯ್ಸ್ ಡೈಲಿ ನ್ಯೂಸ್*
ಕಳೆದ ಒಂದು ವಾರದಿಂದ ಶಿರಸಿ ತಾಲೂಕಿನ ಮತ್ತಿಘಟ್ಟಾದ ಜೋಗನ ಹಕ್ಕಲು ಫಾಲ್ಸ್ ನಲ್ಲಿ ಕಾಣೆಯಾಗಿದ್ದ ಪವನ ಗಣಪತಿ ಜೋಗಿ ಅಂಕೋಲಾ ತಾಲೂಕಿನ ಡೊಂಗ್ರಿ ಪಂಚಾಯತಿ ವ್ಯಾಪ್ತಿಯ ಮಳಗಾಂನಲ್ಲಿ ಶವವಾಗಿ ಪತ್ತೆಯಾಗಿದ್ದಾನೆಂದು ಡಿವಾಯಸ್ಪಿ ಗೀತಾ ಪಾಟಿಲ್ ಖಚಿತ ಪಡಿಸಿದ್ದಾರೆ.ಪವನ್ ಕಿವಿಯಲ್ಲಿ ಬಂಗಾರದ ಸ್ಟಾರ್ ಇರುವದನ್ನು ನೋಡಿಯೇ ಆತನ ಪಾಲಕರು ಪವನ್ ಎಂದು ಗುರುತಿಸಿರುವದಾಗಿ ತಿಳಿದು ಬಂದಿದೆ. ಶವ ಹುಡುಕಾಟದಲ್ಲಿ ಸ್ಥಳೀಯರು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಿದ್ದಾರೆ.ಜೂನ್ 22 ರಂದು ಕಾಣೆಯಾಗಿದ್ದ ಪವನ್ ಹುಡುಕಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ಶಿರಸಿಯ ಮಳುಗು ತಜ್ಷಾರ ತಂಡವಾದ ಶ್ರಮ ಮಾರಿಕಾಂಬಾ ಲೈಪ್ ಗಾರ್ಡನವರು ಕೂಡಾ ತೀರಾ ಹುಟುಕಾಟ ನಡೆಸಿದ್ದರು.ಆದರೆ ಇಂದು ಗಂಗಾವಳಿ ನದಿಯಲ್ಲಿ ಸಿಕ್ಕಿರುವ ಬಗ್ಗೆ ಮಾಹಿತಿ ಇದೆ.ಈ ಬಗ್ಗೆ ಡಿವಾಯಸ್ಪಿ ಗೀತಾ ಪಾಟಿಲ್ ಹಾಗು ಸಿಪಿಆಯ್ ಮಂಜುನಾಥ ಗೌಡಾ ದೃಡ ಪಡಿಸಿದ್ದಾರೆ.