*ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್*
ನಿನ್ನೆ ಸಂಜೆ ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ಶಂಕರಪುರದ ವಿದ್ಯಾಪೋಷಕ್ ವಿದ್ಯಾರ್ಥಿ ಚೇತನ್ ಜೋಗಿ ಮನೆಯ ಮೇಲೆ ತೆಂಗಿನ ಮರ ಬಿದ್ದು ಮನೆಗೆ ತೀವ್ರ ಹಾನಿಯಾಗಿದೆ. ಮನೆಯೊಳಗೆ ಇದ್ದ ತಾಯಿಯ ತಲೆಯ ಮೇಲೆ ಮರ ಬಿದ್ದರೂ ಪವಾಡ ಸದೃಶವಾಗಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾದರು.ಇಂದು ಅವರ ಮನೆಗೆ ಎಂ. ಗಂಗಾಧರ ರಾವ್ ಮತ್ತು ಮುರಲಿ ಕಡೆಕಾರ್ ಹಾಗೂ ಪಿಡಬ್ಲ್ಯೂಡಿ ಸಹಾಯಕ ಇಂಜಿನಿಯರ್ ಸೋಮನಾಥ ಭಂಡಾರಿ, ಅರಣ್ಯ ಅಧಿಕಾರಿಗಳಾದ ಪ್ರವೀಣ್ ನಾಯಕ್ ಭೇಟಿ ನೀಡಿ ಸಂಸ್ಥೆಯ ಅಧ್ಯಕ್ಷರ ಕೆಲಸಗಾರರು ಬಂದು ಮನೆಯನ್ನು ದುರಸ್ಥಿಗೊಳಿಸಲಿದ್ದಾರೆ.