*ಪಶ್ಚಿಮ ಘಟ್ಟ ವಾಯ್ಸ್ *ಹುಲಿ ಸಂರಕ್ಷಣೆ ಎಂದರೆ ಈಗ ಬರೀ ಹಣ ಖರ್ಚು ಕಾರ್ಯಕ್ರಮವೇ, ಕರ್ನಾಟಕ ಅರಣ್ಯ ಇಲಾಖೆಯಲ್ಲಿ ದಕ್ಷ ಅಧಿಕಾರಿಗಳು ಏನಾದರು: ಉಲ್ಲಾಸ ಕಾರಂತ ಪ್ರಶ್ನೆ?

*ಪಶ್ಚಿಮ ಘಟ್ಟ ವಾಯ್ಸ್* ಕರ್ನಾಟಕ ಮಾತ್ರವಲ್ಲ. ಭಾರತದಲ್ಲಿ ಈಗ ಹುಲಿ ಸಂರಕ್ಷಣಾ ಕಾರ್ಯಕ್ರಮ ಎಂದರೆ ಹಣ ಖರ್ಚು ಮಾಡುವ, ಹಣ ಮಾಡಿಕೊಳ್ಳುವ ಯೋಜನೆಯಾಗಿ ಮಾರ್ಪಟ್ಟಿದೆ. ಕರ್ನಾಟಕದಲ್ಲಿ ಹುಲಿ ಯೋಜನೆಯ ನೆಪದಲ್ಲಿ ಕೋಟಿಗಟ್ಟಲೇ ಯೋಜನೆ ರೂಪಿಸಿರುವುದು. ಅದನ್ನು ಖರ್ಚು ಮಾಡುವುದು. ಕೆಲವರು ಹಣ ಮಾಡಿಕೊಳ್ಳುವ ಮಾರ್ಗವಾಗಿ ಬದಲಾಗಿದೆ. ಹೀಗಾದರೆ ಹುಲಿ ಸಂರಕ್ಷಣೆ ಹೇಗೆ ಸಾಧ್ಯ, ಅರಣ್ಯ ಇಲಾಖೆಯಲ್ಲಿ ಹಿಂದೆಲ್ಲಾ ದಕ್ಷತೆಗೆ ಹೆಸರಾದ ಅರಣ್ಯ ಅಧಿಕಾರಿಗಳಿದ್ದರು.ಕೆಳ ಹಂತದಲ್ಲೂ ನಿಷ್ಠೆಯಿಂದ ಕೆಲಸ ಮಾಡುವ ಸಿಬ್ಬಂದಿಗಳಿದ್ದರು. ಈಗ ಅವರೆಲ್ಲ ಏನಾದರು ಎನ್ನುವ ಪ್ರಶ್ನೆ ಸಹಜವಾಗಿ ನಮ್ಮಲ್ಲಿ ಮೂಡುತ್ತದೆ. ಕರ್ನಾಟಕದ ಅರಣ್ಯ ಇಲಾಖೆ ಎಂದರೆ ಅದಕ್ಕೊಂದು ಹೆಸರಿತ್ತು. ಮಾದರಿ ಎನ್ನುವ ವ್ಯವಸ್ಥೆಯಿತ್ತು. ಈಗ ಅದನ್ನೆಲ್ಲಾ ಹುಡುಕುವ ಸ್ಥಿತಿಯಿದೆ. ನಾಯಕತ್ವ ಎನ್ನುವುದು ಕಾಣುತ್ತಲೇ ಇಲ್ಲ. ಕೆಲಸ ಮಾಡುವವರಿಗೂ ಸರಿಯಾದ ಬೆಂಬಲವಿಲ್ಲ.ಹೀಗೆಯೇ ಆದರೆ ಐದು ಹುಲಿಗಳು ಮೃತಪಟ್ಟಂತಹ ಸನ್ನಿವೇಶಗಳು ಹೆಚ್ಚುತ್ತಲೇ ಇರುತ್ತವೆ. ಅರಣ್ಯ,ವನ್ಯಜೀವಿ ಸಂರಕ್ಷಣೆ ಎನ್ನುವುದು ಬರೀ ಬಾಯಿ ಮಾತಿನಲ್ಲಿ ಉಳಿದರೆ ಏನು ಪ್ರಯೋಜನ ಹೇಳಿ.
PGK

Post a Comment

Previous Post Next Post