*ಮುಂಡಗೋಡ*: ತಾಲೂಕಿನ ಮಳಗಿ ಸಮೀಪ ಕೊಳಗಿ ಕ್ರಾಸ್ ನಲ್ಲಿ ಮಹಿಳೆಯೊಬ್ಬಳ ಶವ ರುಂಡದಿಂದ =ಮುಂಡ ಬೇರ್ಪಟ್ಟ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಂದು ಸಂಜೆ ಕಟ್ಟಿಗೆ ತರಲು ಹೋದ ಮಹಿಳೆ ಒಬ್ಬರ ಕಣ್ಣಿಗೆ ಮಹಿಳೆಯ ಶವ ಕಂಡ ನಂತರ ಸುದ್ದಿಯಾಗಿದೆ. 35 ರಿಂದ 40 ವರ್ಷದ ವಯಸ್ಸಿನ ಮಹಿಳೆ ಎನ್ನಲಾಗುತ್ತಿದ್ದು ಮಹಿಳೆಯ ಮುಂಡ ಮಾತ್ರ ಇದ್ದು ರುಂಡ ಪತ್ತೆಯಾಗಿಲ್ಲ. ಮಳಗಿ -ಮುಂಡಗೋಡ ಹೆದ್ದಾರಿ ಕೊಳಗಿ ಕ್ರಾಸ್ ಒಳಗೆ ಸುಮಾರು 200 ಮೀಟರ್ ದೂರದಲ್ಲಿ ಈ ಶವ ಪತ್ತೆಯಾಗಿದೆ. ಈಗಾಗಲೇ ಮುಂಡಗೋಡು ಪೊಲೀಸರು ಸ್ಥಳದಲ್ಲಿದ್ದಾರೆ. ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಹಿಳೆಯ ಗುರುತು ಇದುವರೆಗೂ ಪತ್ತೆಯಾಗಿಲ್ಲ.ಬೇರೆಡೆ ಕೊಲೆಗೈದು ಶವವನ್ನು ಇಲ್ಲಿ ತಂದು ಹಾಕಿರುವ ಶಂಕೆಯೂ ವ್ಯಕ್ತವಾಗುತ್ತಿದೆ. ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಾಗಿದೆ.