(ಪಶ್ಚಿಮ ಘಟ್ಟ ವಾಯ್ಸ್ ಡೈಲಿ ನ್ಯೂಸ್) ಸಿರ್ಸಿ ಸಿದ್ದಾಪುರ .ಶಾಸಕ ಭೀಮಣ್ಣನಾಯ್ಕ ಅವರಿಗೆ ; ಬಿಜೆಪಿ ಮುಖಂಡ ಅನಂತಮೂರ್ತಿಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವಿಚಾರದಲ್ಲಿ ಸವಾಲು!
1) ನ.13, 2020 ರಂದು ಕಾರ್ಡಿಯೋಲಾಜಿ, ನ್ಯೂರೊಲೊಜಿ, ನೆಪ್ರೋಲೋಜಿ ಸೇರಿದಂತೆ ಹಲವಾರು ಸೂಪರ್ ಸ್ಪೆಷಾಲಿಟಿ ಹೊಂದಿರುವ ಆಸ್ಪತ್ರೆ ಅನುಮೋದನೆಯಾಗಿದ್ದು, ರೂ.112 ಕೋಟಿ ಕಟ್ಟಡಕ್ಕೆ, ರೂ.30 ಕೋಟಿ ಸಾಮಗ್ರಿಗಳಿಗೆ ಮೀಸಲಿಡಲಾಗಿತ್ತು, ಕಟ್ಟಡ ಕೆಲಸ 80% ಮುಗಿದ ಕೂಡಲೇ ವೈದ್ಯರ, ಸಿಬ್ಬಂದಿ ನೇಮಕಾತಿ ಮತ್ತು ಯತ್ರೋಪಕರಣಗಳಿಗೆ ಟೆಂಡರ್ ಕರೆಯಬೇಕು ಎಂದು ಆದೇಶದಲ್ಲಿದೆ, 80 % ಕೆಲಸ ಮುಗಿದು ಒಂದು ವರ್ಷವಾದರೂ ಇನ್ನೂ ಯಾಕೆ ಟೆಂಡರ್ ಕರೆದಿಲ್ಲ ? ವೈದ್ಯರ ನೇಮಕಾತಿ ಆಗಿಲ್ಲ ? ಹಿಂದಿನ ಉದ್ದೇಶವೇನು ?
2) ಮೇಲ್ದರ್ಜೆಗೇರಿರುವ ಸೂಪರ್ ಸ್ಪೆಷಾಲಿಟಿಗೆ ಸಮವಾದ ಆಸ್ಪತ್ರೆಗೆ ರೂ. 26 ಕೋಟಿ ಪ್ರಸ್ತಾವನೆಯ ಸಲಕರಣೆ ಬದಲಿಗೆ 5.20 ಕೋಟಿ ರೂಪಾಯಿಗೆ ಇಳಿಸಿದ್ದೀರಿ ಇದಕ್ಕೆ ಕಾರಣವೇನು ?
3) ಬಡವರಿಗಾಗಿ ಉಚಿತವಾಗಿ ಸಿಗುತ್ತಿದ್ದ 15 ಕೋಟಿ ರೂಪಾಯಿಯ MRI ಮತ್ತು 2 ಕೋಟಿ ಮೌಲ್ಯದ CITI ಸ್ಕ್ಯಾನ್ ಮಷಿನ್ ಸಹಿತ ಹಲವಾರು ಪರಿಕರಗಳನ್ನು ಪ್ರಸ್ತಾವನೆಯಿಂದ ಯಾಕೆ ಮಾಯ ಮಾಡಿದ್ದೀರಿ ?
4) ಹಿಂದಿದ್ದ 100 ಹಾಸಿಗೆಯಿಂದ 250 ಹಾಸಿಗೆ ಆಸ್ಪತ್ರೆಗೆ ಬೇಕಾಗಿದ್ದ ಸಿಬ್ಬಂದಿ 197, ಈಗಿರುವ ಸಿಬ್ಬಂದಿ 90, ಹೆಚ್ಚುವರಿಯಾಗಿ ಬೇಕಾಗಿದ್ದು 107, ಈಗ ಹಾಕಿಸಿದ್ದು 37, ಅದರಲ್ಲಿ ಹಾರ್ಟ್ ಸ್ಪೆಷಲಿಸ್ಟ್ ಇಲ್ಲ, ನ್ಯೂರೊಲೊಜಿ, ನೆಪ್ರೋಲೋಜಿ ಇಲ್ಲ, ಆ ವಿಭಾಗಕ್ಕೆ ಬೇಕಾದ ಸಿಬ್ಬಂದಿ ಕೂಡ ಇಲ್ಲ, ಇದಕ್ಕೆ ನಿಮ್ಮ ಉತ್ತರವೇನು ?
5)ಪ್ರಸ್ತಾವನೆ ಸಲ್ಲಿಸಿ 2 ವರ್ಷದ ನಂತರ ಈಗ ನೇಮಕಾತಿ ಆಗಿರುವುದು ಜೆನರಲ್ ಸರ್ಜನ್, ಫಿಜಿಷಿಯನ್, ಅರವಳಿಕೆ ತಜ್ಞರು, ಕೀಲು ಮತ್ತು ಮೂಳೆ ತಜ್ಞರು ಇದು ಬೇಸಿಕ್ ಆಗಿರುತ್ತದೆ, ಅಂದರೆ ತಾಲೂಕು ಆಸ್ಪತ್ರೆಗೆ ನೇಮಕ ಮಾಡುವಷ್ಟು ಮಾಡಿದ್ದಾರೆ ಹೊರತು ಜಿಲ್ಲಾಸ್ಪತ್ರೆಗೆಯೋ ಅಥವಾ ಮೇಲ್ದರ್ಜ್ಗೆರಿದ ಆಸ್ಪತ್ರೆಗೆ ಅಲ್ಲ, ಅಲ್ಲಿಗೆ ಟ್ರಾಮಾ ಸೆಂಟರ್, ಕ್ಯಾತ್ ಲ್ಯಾಬ್, ನೆಪ್ರೋಲೋಜಿ ಇಲ್ಲದೇ, ತಾಲೂಕು ಮಟ್ಟದ ಆಸ್ಪತ್ರೆ ಮಾಡುವುದಾದರೆ 142 ಕೋಟಿಯ ಕಟ್ಟಡ ಬೇಕಾಗಿತ್ತಾ ?
6) ಅರೋಗ್ಯ ಮಂತ್ರಿಯವರು ಎರಡು ಬಾರಿ ನಮ್ಮ ಜಿಲ್ಲೆಗೆ ಬಂದು ಶಿರಸಿ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆ ಮಾಡುತ್ತೇನೆ ಎಂದು ಹೇಳಿದ್ದಾರೆ, ಜನರಿಗೆ ಟೋಪಿ ಹಾಕುವ ಕೆಲಸವನ್ನೇ ಮಾಡುತ್ತಿದ್ದಾರೆ ವಿನಃ ಜಿಲ್ಲಾ ಆಸ್ಪತ್ರೆ ಮಾಡುವ ಯಾವುದೇ ಪ್ರಕ್ರಿಯೆ ಇಲ್ಲ, ಜಿಲ್ಲಾ ಆಸ್ಪತ್ರೆ ಮಾಡುವ ಡಾಕ್ಯುಮೆಂಟ್ ಎಲ್ಲಿ ? ಎಷ್ಟು ದಿನ ಸುಳ್ಳು ಹೇಳುತ್ತೀರೀ ?
7) ನೀವು ಈ ಮೂಲಕ ಒಬ್ಬ ವ್ಯಕ್ತಿಗೆ ವಾಹನ ಅಪಘಾತವಾಗಿ ತಲೆಗೆ ಪೆಟ್ಟು ಬಿದ್ದರೆ ರಕ್ತಸ್ರಾವ ತಡೆಯುವ, ಜೀವ ಉಳಿಸುವ ನ್ಯೂರೋಲಾಜಿ ವಿಭಾಗ ಅಥವಾ ಟ್ರಾಮಾ ಸೆಂಟರ್ ಮಾಡುವ ಅವಕಾಶ ಹಾಳು ಮಾಡಿದ್ದೀರಿ, ಈ ಕ್ಷೇತ್ರದ ಜನ ನಿಮ್ಮನ್ನ ಕ್ಷಮಿಸುತ್ತಾರೆಯೇ ?
8) ಬಡವರಿಗೆ ಹಾರ್ಟ್ ಅಟ್ಯಾಕ್ ಆದರೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿ ಜೀವ ಉಳಿಸ ಬಹುದಾದ "ಕ್ಯಾತ್ ಲ್ಯಾಬ್" ಮಾಡುವ ಅವಕಾಶ ಹಾಳು ಮಾಡಿದ್ದೀರಿ. ನಮ್ಮಲ್ಲಿ ನೂರಾರು ಜನ ಡಯಾಲಿಸಿಸ್ ಮಾಡಿಸಿಕೊಳ್ಳುವ ಬಡ ರೋಗಿಗಳಿದ್ದಾರೆ, ನೆಪ್ರೂಲಜಿಗೆ ನೇಮಕ ಮಾಡದೆ ತೆಗೆದು ಹಾಕಿದರೆ ಅವರ ಕಣ್ಣೀರು ಸುಮ್ಮನೆ ಬಿಡುತ್ತದೆಯೇ? ನಮ್ಮ ಭಾಗದಿಂದ ದಿನಕ್ಕೆ ಸಾವಿರಾರು ಜನ ದೂರದ ಮಂಗಳೂರಿಗೆ, ಹುಬ್ಬಳ್ಳಿ ಶಿವಮೊಗ್ಗಕ್ಕೆ ಆಸ್ಪತ್ರೆಗಾಗಿ ಹೋಗುತ್ತಾರೆ, ನಿಮ್ಮ ಹತ್ತಿರ ಹಣ ತರಲು ತಾಕತ್ತಿಲ್ಲ ಎಂದರೆ ಬಿಡಿ, ಹಿಂದೆ ನಾವು ಮೀಸಲಾಗಿ ಇಟ್ಟ 30 ಕೋಟಿ ಹಣವನ್ನು ತಿಂದು ನಿಮ್ಮ ಸರಕಾರ ಹಾಕುವ ಕೆಲಸ ಯಾಕೆ ಮಾಡುತ್ತೀರಿ ?
ವರದಿ : ರಾಘವೇಂದ್ರ ಸಂಪೋಡಿ sirsi