*ಪಶ್ಚಿಮಘಟ್ಟವಾಯ್ಸ್ ಡೈಲಿ ನ್ಯೂಸ್*
ಜನವರಿ 0: ಕೇಂದ್ರ ಸರ್ಕಾರದ ಅಮೃತ್ – 2.0 ಯೋಜನೆಯ ಜಲಮೂಲಗಳ ಪುನಶ್ಚೇತನ ಕಾರ್ಯಕ್ರಮದಡಿ, ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ 4 ಕೆರೆಗಳನ್ನು 20.50 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಡಳಿತ ಕೈಗೆತ್ತಿಕೊಂಡಿದೆ. ಕಾಮಗಾರಿ ಅನುಷ್ಠಾನಕ್ಕೆ ಪೂರ್ವಭಾವಿ ಸಿದ್ದತೆ.
ಆದರೆ ಪಾಲಿಕೆ 1 ನೇ ವಾರ್ಡ್ ವ್ಯಾಪ್ತಿಯ ಸೋಮಿನಕೊಪ್ಪದಲ್ಲಿರುವ, ಶಿವಮೊಗ್ಗ ತಾಲೂಕಿನಲ್ಲಿಯೇ ಅತೀ ದೊಡ್ಡ ಕೆರೆಯ ಪುನಶ್ಚೇತನ – ಅಭಿವೃದ್ದಿಯನ್ನೇ ಜಿಲ್ಲಾಡಳಿತದ ಮರೆತಂತೆ ಕಾಣುತ್ತಿದೆ…!
ಹೌದು. ಸೋಮಿನಕೊಪ್ಪ ಕೆರೆಯು ಸರಿಸುಮಾರು 95 ಎಕರೆಗೂ ಅಧಿಕ ವಿಸ್ತೀರ್ಣ ಹೊಂದಿದೆ. ಪ್ರಸ್ತುತ ವರ್ಷ ಕೂಡ ಕೆರೆಯ ನೀರಿನ ಸಂಗ್ರಹದ ಪ್ರಮಾಣ ಗರಿಷ್ಠ ಮಟ್ಟ ತಲುಪಿದೆ. ಆದರೆ ಸದರಿ ವಿಶಾಲವಾದ ಕೆರೆಯನ್ನು ಅಭಿವೃದ್ದಿಗೊಳಿಸಿ, ಪ್ರವಾಸಿ ತಾಣವಾಗಿ ಅಭಿವೃದ್ದಿಗೊಳಿಸುವ ಯೋಜನೆಗಳು ಸಂಪೂರ್ಣ ಮೂಲೆಗುಂಪಾಗಿದೆ. ಆಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ತುತ್ತಾಗಿದೆ.