ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಹೋರಾಟಕ್ಕೆ: ವಿಶ್ವ ನಿಸರ್ಗ ಪುನರ್ ನಿರ್ಮಾಣ ಸಂಸ್ಥೆ (ರಿ) ಸಂಪೂರ್ಣ ಬೆಂಬಲ ರಾಜ್ಯ ಕಾರ್ಯದರ್ಶಿ ಕೃಷ್ಣ ಬಳಿಗಾರ ಹೇಳಿಕೆ.

ವಿಶ್ವ ನಿಸರ್ಗ ಪುನರ್ ನಿರ್ಮಾಣ ಸಂಸ್ಥೆ (ರಿ) ರಾಜ್ಯ ಕಾರ್ಯದರ್ಶಿ ಕೃಷ್ಣ ಎಚ್ ಬಳಿಗಾರ್ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಹೋರಾಟಕ್ಕೆ ನನ್ನ ಪೂರ್ಣ ಬೆಂಬಲ ಘೋಷಿಸಿದೆ. ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶದಲ್ಲಿ ಹರಿಯುವ ಬೇಡ್ತಿ ನದಿಯನ್ನು ತಿರುಗಿಸಲು ಸಾವಿರಾರು ಎಕರೆ ಅರಣ್ಯ ನಾಶ ಮಾಡುವುದು ವಿನಾಶಕಾರಿ ನಿರ್ಧಾರವಾಗಲಿದೆ. ಈಗಾಗಲೇ ಗುಡ್ಡಕುಸಿತದ ಭೀತಿಯಲ್ಲಿರುವ ಮಲೆನಾಡು, ಈ ಯೋಜನೆಯಿಂದ ಪರಿಸರ ವಿಕೋಪಕ್ಕೆ ತುತ್ತಾಗುವುದು ಖಚಿತ. ಇಲ್ಲಿ ಪಕ್ಷ, ಜಾತಿ, ಧರ್ಮದ ಭೇದ ಮರೆತು 'ಮಣ್ಣಿನ ಮಕ್ಕಳಾಗಿ' ನಾವು ಒಂದಾಗಬೇಕಿದೆ. ನಾನು ಈ ಜಿಲ್ಲೆಯ ಮಣ್ಣಿನ ಮಗನಾಗಿ ಸಮಾವೇಶದಲ್ಲಿ ಭಾಗಿಯಾಗುತ್ತಿದ್ದೇನೆ. ಬನ್ನಿ, ನಮ್ಮ ನಿಸರ್ಗವನ್ನು ಒಟ್ಟಾಗಿ ಉಳಿಸೋಣ ಎಂದು ಆಗ್ರಹಿಸುತ್ತಿದ್ದೇನೆ.

PGK

Post a Comment

Previous Post Next Post