ಶಿವಮೊಗ್ಗ: ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿ ವರೆಗಿನ ಸರಕಾರಿ ಶಾಲೆಯ ಮಕ್ಕಳಿಗೆ ಬಿಸಿಯೂಟ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಹೈಲೈಟ್ಸ್:
- ಸರಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಸ್ಕೂಲ್ ಬ್ಯಾಂಡ್ ಆರಂಭ
- 'ನಾನು ಶಿಕ್ಷಣ ಸಚಿವನಾದಾಗ ಅನೇಕರು ಕನ್ನಡ ಬರಲ್ಲ ಎಂದು ಹೀಯಾಳಿಸಿದ್ದರು. ಅವರಿಗೆ ಈ ಇಲಾಖೆಯಲ್ಲಿ ಕೆಲಸ ಮಾಡುವ ಮೂಲಕ ಉತ್ತರ ಕೊಡುತ್ತೇನೆ
- ಕೇಂದ್ರದಲ್ಲಿ ಮನರೇಗಾದಿಂದ 'ಮಹಾತ್ಮ ಗಾಂಧೀಜಿ' ಅವರ ಹೆಸರು ಕೈಬಿಡಲಾಗಿದೆ.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ನೀಡುತ್ತಿರುವ ಬಿಸಿಯೂಟದಿಂದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಇದರಿಂದ ಹೆಚ್ಚುವರಿಯಾಗಿ 200 ಕೋಟಿ ರೂ. ವೆಚ್ಚವಾಗಲಿದೆ. ಇದು ಸರಕಾರದ ಪಾಲಿಗೆ ಹೊರೆ ಏನಲ್ಲ. ಮಕ್ಕಳ ಭವಿಷ್ಯಕ್ಕಾಗಿ ಮಾಡುವ ಹೂಡಿಕೆಯಾಗಲಿದೆ ಎಂದರು.