*ಪಶ್ಚಿಮ ಘಟ್ಟ ವಾಯ್ಸ್ ಡೈಲಿ ನ್ಯೂಸ್* ಕರ್ನಾಟಕ ಸೇವಾ ರತ್ನ" ಪ್ರಶಸ್ತಿಗೆ ಪಿಎಸ್ಐ ಬಿ ನಾಗಪ್ಪ ಆಯ್ಕೆ! ಸಿರ್ಸಿ ಸಾರ್ವಜನಿಕ ವಲಯದಲ್ಲಿ ಕೀರ್ತಿಗೆ ಪಾತ್ರರಾದ ದಕ್ಷ ಅಧಿಕಾರಿ.

*ಪಶ್ಚಿಮ ಘಟ್ಟ ವಾಯ್ಸ್  ಡೈಲಿ ನ್ಯೂಸ್*

*ಶಿರಸಿ* : ದಕ್ಷ ಅಧಿಕಾರಿ ಎಂದು ಖ್ಯಾತವಾಗಿರುವ ಶಿರಸಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಲದಿಂದ ದಕ್ಷತೆಯಿಂದ ಕಾರ್ಯನಿರ್ವಹಿಸುವ ಅಧಿಕಾರಿಯಾಗಿದ್ದು, ಪಿಎಸ್ಐ ಕರ್ನಾಟಕ ಪೊಲೀಸ್ ಸೇವೆಯಲ್ಲಿ ನಿಷ್ಠೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ, ಮುಖ್ಯಮಂತ್ರಿ ಪದಕ ವಿಜೇತರೂ ಆಗಿರುವ ಶಿರಸಿಯ ನಗರ ಠಾಣೆಯ ಪಿಎಸ್ಐ ನಾಗಪ್ಪ ಬಿ ಅವರು ಕರ್ನಾಟಕ ಪ್ರೇಸ್ ಕ್ಲಬ್ ವಾರ್ಷಿಕ ಪ್ರಶಸ್ತೆಗೆ ಆಯ್ಕೆಯಾಗಿದ್ದಾರೆ.‌ನಾಗಪ್ಪ ಅವರ ಪಾಹಿತ್ಯ ಹಾಗೂ ಸಮಾಜ ಸೇವೆ ಗುರುತಿಸಿ 
ಕರ್ನಾಟಕ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ‌ ನಡೆಯಲಿರುವ “ಸಾಧಕರ ಸಮಾಗಮ” ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ. ಬದುಕಿನೊಂದಿಗೆ ಸಾಧಕರ ಜೀವನವು ಕತ್ತಲೆಯಲ್ಲಿ ಹೊಳೆಯುವ ನಕ್ಷತ್ರಗಳಂತೆ, ಕುಟುಂಬ ಮತ್ತು ಸಮಾಜದೊಂದಿಗೆ ಹೋರಾಟ ಮಾಡುವ ಜೊತೆಗೆ ಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಸುಲಭವಲ್ಲ. ಆದರೂ ಎಲ್ಲವನ್ನು ಮೆಟ್ಟಿನಿಂತು ಸಾಧಿಸುವ ಛಲ ತೋರಿದ ನಿಮ್ಮ ಧೈರ್ಯ ಮತ್ತು ಆತ್ಮಾಭಿಮಾನಕ್ಕೆ ಈ ನಾಡು ಧನ್ಯ. ನಿಮ್ಮಂತ ಸಾಧಕರನ್ನು ಗೌರವಿಸುವುದು ಮತ್ತು ಸ್ವಲ್ಪ ಸಮಯ ನಿಮ್ಮೊಂದಿಗೆ ಕಳೆಯುವುದೇ ನಮ್ಮ ಸೌಭಾಗ್ಯ ಎನ್ನಬಹುದು ' ಎಂದು ಕರ್ನಾಟಕ ಪ್ರೇಸ್ ಕ್ಲಬ್ ವತಿಯಿಂದ ನಾಗಪ್ಪ ಅವರಿಗೆ ಪ್ರಶಂಸನೀಯವಾಗಿ ಪತ್ರ ಬರೆಯಲಾಗಿದೆ.‌ಸಾಧಕರ ಸಮಾಗಮ ಕಾರ್ಯಕ್ರಮವು ಬೆಂಗಳೂರಿನ ನಾಗರಭಾವಿಯ ಕಲಾಗ್ರಾಮದಲ್ಲಿ ಜ.13 ರಂದು ಸಂಜೆ 4.00 ಗಂಟೆಗೆ ಜರುಗಲಿದ್ದು, ಇದೊಂದು ರಾಜ್ಯ ಮಟ್ಟದ ಕಾರ್ಯಕ್ರಮವಾಗಿದೆ. ಇನ್ನು ಈ‌ ಹಿಂದೆಯೂ‌ ನಾಗಪ್ಪ ಅವರು ಸಾಹಿತ್ಯಕ್ಕಾಗಿ ಅನೇಕ ಗೌರವ ಸ್ವೀಕರಿಸಿದ್ದಾರೆ.

Source : ಪಶ್ಚಿಮಘಟ್ಟ ವಾಯ್ಸ್.
PGK

Post a Comment

Previous Post Next Post