*ಡಿವಾಯಸ್ಪಿ ಗೀತಾ ಪಾಟಿಲ್,ಸಿಪಿಆಯ್ ಶಶಿಕಾಂತ ವರ್ಮಾ ಹಾಗು ಪಿಎಸ್ಆಯ್ ರತ್ನಾಕುರಿ ಮತ್ತವರ ಸಿಬ್ಬಂದಿಗಳ ಚಾಲೆಂಜಿಗ್ ಕಾರ್ಯಚರಣೆಗೆ ಕೊನೆಗೂ ದಕ್ಕಿದ ಯಶಸ್ಸು*
ಇಡೀ ಜಿಲ್ಲೆಯನ್ನೆ ಒಮ್ಮೆ ಬೆಚ್ಚಿ ಬಿಳಿಸಿದ್ದ ಶಿರಸಿ ಕಸ್ತೂರಬಾ ನಗರದ ಎರಡು ವಿದ್ಯಾರ್ಥಿಗಳ ಕಾಣೆಯಾಗಿರುವ ಪ್ರಕರಣ ಕೊನೆಗೂ ಪೋಲಿಸರ ಮಿಂಚಿನ ಕಾರ್ಯಚರಣೆ ಮೂಲಕ ಸುಖಾಂತ್ಯಗೊಂಡಿದ್ದು ಕಾಣೆಯಾಗಿದ್ದ ಎರಡು ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಮಹಾರಾಷ್ಟ್ರ ರಾಜ್ಯದ ಮುಂಬೈನಲ್ಲಿ ಪತ್ತೆ ಹಚ್ಚುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.ಎಂಟನೆ ಹಾಗು ಅರನೆ ತರಗತಿ ಓದುತ್ತಿದ್ದ ಈ ಎರಡು ಮಕ್ಕಳು ಅ,16 ರಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಮನೆಯಿಂದ ಚಿತ್ರಕಲಾ ತರಬೇತಿಗೆ ಹೋಗಿ ಬರುವದಾಗಿ ಹೇಳಿ ನಾಪತ್ತೆಯಾಗಿದ್ದರು.ಈ ಸುದ್ದಿ ತಿಳಿದ ಪಾಲಕರು ಎಲ್ಲಾ ಕಡೆ ಹುಡುಕಿ ಎಲ್ಲೂ ಸಿಗದಿದ್ದಾಗ ಮಾರ್ಕೆಟ್ ಠಾಣೆ ಪೋಲಿಸರಿಗೆ ದೂರು ಸಲ್ಲಿಸಿದ್ದರು.ಇದನ್ನು ಚಾಲೆಂಜಾಗಿ ಸ್ವೀಕರಿಸಿದ್ದ ಪೋಲಿಸರು ಕೊನೆಗೂ ಮಕ್ಕಳನ್ನು ಮುಂಬೈನಲ್ಲಿ ಪತ್ತೆ ಹಚ್ಚಿದ್ದಾರೆ.ಈ ಮಕ್ಕಳು ಮನೆ ಬಿಟ್ಟವರೇ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ಟಿಕೆಟ್ ಕೌಂಟರ್ ಹತ್ತಿರ ಚಿತ್ರದುರ್ಗ ಬಸ್ ಬಗ್ಗೆ ವಿಚಾರಿಸಿದ್ದಾರೆ.ಆ ಬಸ್ ರಾತ್ರಿ ಎಂಟು ಗಂಟೆಗೆ ಇದ್ದಿದ್ದರಿಂದ ಅವರು ಹುಬ್ಬಳ್ಳಿ ಬಸ್ಸಿಗೆ ಹತ್ತಿ ಅಲ್ಲಿಂದ ಬೆಳಗಾವಿ ಮೂಲಕ ಪೂಣಾದಿಂದ ಮುಂಬೈಗೆ ಹೋಗಿದ್ದಾರೆ.ಅಲ್ಲಿ ಪೋಲಿಸರ ಕಣ್ಣಿಗೆ ಬಿದ್ದಿದ್ದಾರೆ. ಮಕ್ಕಳು ಹುಬ್ಬಳ್ಳಿ ಬಸ್ ಹತ್ತಿರುವ ಜಾಡನ್ನು ಸಿಸಿ ಕ್ಯಾಮರದ ಮೂಲಕ ತಿಳಿದ ಪೋಲಿಸರು ಎರಡು ತಂಡವಾಗಿ ಹುಬ್ಬಳ್ಳಿಗೆ ತೆರಳಿದ್ದಾರೆ.ಅಲ್ಲಿಂದ ಬೆಳಗಾವಿ ಮೂಲಕ ಮುಂಬೈಗೆ ಹೋಗಿರುವ ಬಗ್ಗೆ ತಿಳಿದ ಪೋಲಿಸರು ಅಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.ಮಕ್ಕಳು ಹೀಗೆ ಮಾಡಲು ಎನು ಕಾರಣ ಎನ್ನುವ ಮಾಹಿತಿ ಪೋಲಿಸರಿಂದ ತಿಳಿದು ಬರಬೇಕಷ್ಟೇ..ಡಿವಾಯಸ್ಪಿ ಗೀತಾ ಪಾಟಿಲ್ ಹಾಗು ಸಿಪಿಆಯ್ ಶಶಿಕಾಂತ ಇವರ ಸಮರ್ಥವಾದ ಮಾರ್ಗದರ್ಶನ ಪಿಎಸ್ಆಯ್ ರತ್ನಾಕುರಿ ನೇತ್ರತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.