*ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್* ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ/ರಾಜಕೀಯ ತಂತ್ರಗಾರಿಕೆ ಮತ್ತು ರ್ದುಬಳಕೆ,

*ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್*
ಆರ್ ಟಿ ಐ ಅರ್ಜಿ ದುರ್ಬಳಕೆ ಮತ್ತು ಕಾನೂನು ತಿದ್ದುಪಡಿ ವಿಚಾರವಾಗಿ
 ಆರ್‌ಟಿಐ ಅರ್ಜಿ ದುರ್ಬಳಕೆ ಆಗುತ್ತದೆ ಎಂದು ಕನ್ನಡ ದಿನಪತ್ರಿಕೆಗಳಲ್ಲಿ ಒಂದಾದ ವಿಜಯವಾಣಿಯಲ್ಲಿ ಸತತ ಮೂರು ಕಂತುಗಳಲ್ಲಿ ಲೇಖನ ಪ್ರಕಟವಾಗಿದೆ.ಈ ಬಗ್ಗೆ ಸಾರ್ವಜನಿಕರು ಯಾರು ಪ್ರತಿಕ್ರಿಯೆ ಇದ್ದಾಗ  ಲೇಖನ ಏಕಮುಖವಾಗಿ ಸಾಗುತ್ತಿದೆ. ಸಮಾಜದ ಪ್ರತಿಯೊಂದು ಕಾನೂನು ಗಳು ಸಹ ದುರ್ಬಳಕೆಯಾಗುತ್ತಿದೆ.
ಎಂದಾದರೆ ಅದನ್ನು ತಿಳಿದುಕೊಂಡು ಅಂತಹ ವ್ಯಕ್ತಿಗಳನ್ನು ನಿರ್ಬಂಧಿಸುವುದು ಸರಿಯಾದ ಕ್ರಮ. ಹಾಗೆಂದು ಸಂಪೂರ್ಣ ಆರ್ಟಿಐ ಕಾಯ್ದೆ  
 ದುರ್ಬಳಕೆ ಆಗುತ್ತಿದೆ ತಿದ್ದುಪಡಿ ತರಬೇಕು ಎನ್ನುವುದು ಸರಿಯಲ್ಲ.
 ಈ ಬಗ್ಗೆ ಮುಂದುವರೆದು ಹೇಳುವುದಾದರೆ ರಾಜಕಾರಣಿಗಳು ಮತ್ತು ಅಧಿಕಾರಿಗಳ ನಡುವೆ ಇರುವ ಸಂಬಂಧವನ್ನು ಪತ್ರಿಕೆ ಹೊರಗೆಳೆಯಬೇಕು. ಉದಾಹರಣೆ ಒಬ್ಬ ಶಾಸಕನ ಚುನಾವಣೆ ವೆಚ್ಚ ಚುನಾವಣಾ ಆಯೋಗ ನಿಗದಿ ಮಾಡಿದ್ದು 40 ಲಕ್ಷ. ಒಬ್ಬ ಸಂಸತ್ ಸದಸ್ಯನ ಚುನಾವಣೆ ವೆಚ್ಚ 95 ಲಕ್ಷ. ನಮ್ಮ ದೇಶದಲ್ಲಿ ಎಷ್ಟು ಜನ ಶಾಸಕರು ಮತ್ತು ಸಂಸದರು ಪ್ರಾಮಾಣಿಕವಾಗಿ ಚುನಾವಣಾ ಆಯೋಗ ನಿಗದಿಪಡಿಸಿದ ಹಣದ ಮೊತ್ತದ ಒಳಗಡೆ ಖರ್ಚು ಮಾಡಿ ಗೆದ್ದಿದ್ದಾರೆ. ಇದನ್ನು ಮಾಧ್ಯಮ ಪ್ರಶ್ನೆ ಮಾಡಬೇಕಾಗುತ್ತದೆ. ಕನಿಷ್ಠ ಎಮ್ಎಲ್ಎ ಚುನಾವಣೆಗೆ ಐವತ್ತು ಕೋಟಿ ಖರ್ಚು ಮಾಡುವವರು ಇದ್ದಾರೆ. ಎಂಪಿ ಚುನಾವಣೆಗೆ 100 ಕೋಟಿ ಖರ್ಚು ಮಾಡುತ್ತಾರೆ. ಈ ಹಣ ಯಾವ ಮೂಲದಿಂದ ಬರುತ್ತದೆ. ರಾಜಕಾರಣಿಗೂ ಜನಸಾಮಾನ್ಯರಿಗೂ ಇರುವ ಸಮಯ ಒಂದೇ. ಎಲ್ಲರಿಗೂ ದಿನಕ್ಕೆ 24 ಗಂಟೆ. ಆಯ್ಕೆಯಾದ ವ್ಯಕ್ತಿ ಜನಸಾಮಾನ್ಯರ ಕೆಲಸವನ್ನು ಮಾಡಿ ಗೌರವ ಧನ ಹೆಸರಿನಲ್ಲಿ , ತಿಂಗಳ ಸಂಬಳ ಸಾರಿಗೆ ಭತ್ಯೆ ಎಲ್ಲ ತೆಗೆದುಕೊಂಡು, ಯಾವ ವ್ಯವಹಾರದಲ್ಲಿ ಅಷ್ಟೆಲ್ಲ ಹಣ ಗಳಿಸಲು ಆಗುತ್ತಿದೆ. ಇದು ಸಾರ್ವಜನಿಕವಾಗಿ ಚರ್ಚೆ ಆಗಲಿ. ಈ ಚರ್ಚೆಯ ಮೂಲಕ ಸಾರ್ವಜನಿಕರು ಈ ರೀತಿ ಹಣ ಗಳಿಸುವ ಮಾರ್ಗಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
 ಇತ್ತೀಚಿನ ದಿನಗಳಲ್ಲಿ ಯಾವ ಅಧಿಕಾರಿಯೂ ಆರ್‌ಟಿಐ ಅರ್ಜಿಗೆ ಸರಿಯಾದ ಮನ್ನಣೆ ನೀಡುತ್ತಿಲ್ಲ. ಕಾರಣ ಪ್ರತಿಯೊಬ್ಬ ಅಧಿಕಾರಿಯ ಹಿಂದೆ ರಾಜಕಾರಣಿಗಳ ನೆರಳು ಇದ್ದೇ ಇರುತ್ತದೆ. ಭ್ರಷ್ಟಾಚಾರ ಮಾಡಿದ ಅಧಿಕಾರಿಗೆ ಪ್ರಮೋಷನ್ ನೀಡುವ ಈ ವ್ಯವಸ್ಥೆಯಲ್ಲಿ ಮಾಹಿತಿ ಹಕ್ಕು ಆಯೋಗ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆಯೇ ಎನ್ನುವುದನ್ನು ಪ್ರಶ್ನೆ ಮಾಡಬೇಕಾಗುತ್ತದೆ.
 ಈ ರೀತಿ ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿ ನೀಡುವುದಕ್ಕೆ ತಿದ್ದುಪಡಿ ತರುವುದಕ್ಕೆ ಹೊರಟರೆ ಪ್ರತಿ ಗ್ರಾಮ ಗ್ರಾಮಗಳಲ್ಲೂ ಮಾಹಿತಿ ಕೇಳುವವರ ಸಂಖ್ಯೆಯನ್ನು ಹೆಚ್ಚಿಸಲು ಸಹ ಆಗುತ್ತದೆ. ಇದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು. ವ್ಯವಸ್ಥೆಯಲ್ಲಿ ಪ್ರಾಮಾಣಿಕವಾಗಿ ನಡೆದುಕೊಳ್ಳುವುದು ಅತಿ ಅವಶ್ಯಕ. ಲೋಕಾಯುಕ್ತ ದಾಳಿಯಲ್ಲಿ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚಿಗೆ ಗಳಿಸಿದ್ದಾರೆ ಎನ್ನುವ ಸುದ್ದಿ ಭ್ರಷ್ಟಾಚಾರ ಇಲ್ಲದೆ ಇದ್ದರೆ ಬರುತ್ತದೆಯೇ. ಸರ್ಕಾರದ ಮುಂದೆ 40 ಪರ್ಸೆಂಟ್ 60 ಪರ್ಸೆಂಟ್ ಚರ್ಚೆ ಆಗುತ್ತದೆ ಯಲ್ಲಾ ಇದರ ಮೂಲದಲ್ಲಿ ಕಾಮಗಾರಿಗಳಲ್ಲಿ ಅಕ್ರಮಗಳು ಇದ್ದೇ ಇರುತ್ತದೆ ಅಲ್ಲವೇ. ಇದನ್ನು ತಿಳಿದವರು ಒಂದಷ್ಟು ಜನರು ಈಗ ಆರ್‌ಟಿಐ ಅರ್ಜಿ ಹಾಕುತ್ತಿದ್ದಾರೆ. ಆರ್ ಟಿ ಐ ಅರ್ಜಿ ಮೂಲಕ ತೆಗೆದುಕೊಂಡ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿದರೆ ನೂರಾರು ಜನರು ಅರ್ಜಿ ಹಾಕುತ್ತಾರೆ ಎನ್ನುವ ಕಾರಣಕ್ಕೆ ಅಧಿಕಾರಿಗಳು ಅರ್ಜಿದಾರನಿಗೆ ಹಣ ನೀಡುತ್ತಿರುವುದು. ಅಧಿಕಾರಿ ಪ್ರಾಮಾಣಿಕನಾದರೆ ಮಾಹಿತಿ ನೀಡಿ ಸುಮ್ಮನಾಗಬಹುದು.ಆಯೋಗದವರು ವಿಚಾರಣೆ ನಡೆಸಿ ವಜಾ ಮಾಡಬಹುದು. ಆಯೋಗಕ್ಕೆ ಕರ್ನಾಟಕ ಜನಸಂಖ್ಯೆ ಯಷ್ಟು ಅರ್ಜಿ ಬಂದರೂ ವಿಚಾರಣೆ ನಡೆಸಬೇಕಾದ ಜವಾಬ್ದಾರಿ ಇದೆ. ಏಕೆಂದರೆ ಇದು ಸಾರ್ವಜನಿಕರ ಹಕ್ಕು. ಈ ಹಕ್ಕನ್ನು ಮೊಟಕುಗೊಳಿಸುವ ಬದಲು ಆಯೋಗಕ್ಕೆ ಅಗತ್ಯ ಇರುವಷ್ಟು ಅಧಿಕಾರಿಗಳನ್ನು ಸರ್ಕಾರ ನೀಡಬೇಕಾಗಿದೆ. ಅದನ್ನು ಬಿಟ್ಟು ಆಯ್ತು ಆಯೋಗದಲ್ಲಿ ಯಾರೋ ಮಾಡಿದ ತಪ್ಪಿಗೆ ಎಲ್ಲರನ್ನೂ ದೂಷಿಸುವುದು ಅದಕ್ಕೆ ತಿದ್ದುಪಡಿ ತರುವುದು ಎರಡು ಸರಿಯಾದ ಕ್ರಮ ಅಲ್ಲ.

ವರದಿ:-ಗಣೇಶ್ ಬೆಳ್ಳಿ ಸಾಮಾಜಿಕ ಹೋರಾಟಗಾರ. 
PGK

Post a Comment

Previous Post Next Post