*ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್ *ಧರ್ಮಸ್ಥಳ ಪ್ರಕರಣ: 'ದೇವಸ್ತಾನದ ಆದೇಶ...', 'ಎಸ್ಐಟಿ ಮೇಲೆ ನಂಬಿಕೆ ಇದೆ, ಆದರೆ...'; ಮುಸುಕುಧಾರಿ ಸ್ಫೋಟಕ ಹೇಳಿಕೆ!

*ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್* ದಕ್ಷಿಣ ಕನ್ನಡ: ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣದಲ್ಲಿ ಪ್ರಮುಖ ಸಾಕ್ಷಿದಾರನಾಗಿರುವ ಮಾಜಿ ನೈರ್ಮಲ್ಯ ಕಾರ್ಮಿಕ, 'ದೇವಸ್ತಾನದ ಆದೇಶ'ದ ಮೇರೆಗೆ ತಾನು ಈ ಕೆಲಸಗಳನ್ನು ಮಾಡಿದ್ದಾಗಿ ಸ್ಫೋಟಕ ಹೇಳಿಕೆ ನೀಡಿದ್ದಾನೆ.

ಪ್ರಕರಣದಲ್ಲಿ ಎಸ್ ಐಟಿ ತನಿಖೆ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಸುದ್ದಿಮಾಧ್ಯಮಕ್ಕೆ ಹೇಳಿಕೆ ನೀಡಿರುವ ಮುಸುಕುಧಾರಿ, 'ಸುಮಾರು ಎರಡು ದಶಕಗಳ ಕಾಲ ಅರಣ್ಯ ಪ್ರದೇಶಗಳು ಮತ್ತು ನದಿ ದಂಡೆಗಳಲ್ಲಿ ಹಲವಾರು ಗುರುತಿಸಲಾಗದ ಶವಗಳನ್ನು ಹೂಳಿದ್ದೇವೆ. 'ದೇವಸ್ತಾನದ ಆದೇಶ'ದ ಮೇರೆಗೆ ನಾವು ಈ ಕೆಲಸ ಮಾಡಿದ್ದಾಗಿ ಮುಸುಕುಧಾರಿ ಸ್ಫೋಟಕ ಹೇಳಿಕೆ ನೀಡಿದ್ದಾನೆ.

ಖಾಸಗಿ ಸುದ್ದಿವಾಹಿನಿ 'ಇಂಡಿಯಾ ಟುಡೇ' ಜೊತೆ ಮಾತನಾಡಿರುವ ಮುಸುಕುಧಾರಿ, 'ಅಂತ್ಯಕ್ರಿಯೆಗಳಿಗೆ ಯಾವುದೇ ಸ್ಮಶಾನಗಳನ್ನು ಬಳಸಲಾಗುತ್ತಿರಲ್ಲ. ನಾವು ಕಾಡುಗಳಲ್ಲಿ, ಹಳೆಯ ರಸ್ತೆ ಬದಿಗಳಲ್ಲಿ, ನದಿ ದಂಡೆಗಳ ಬಳಿ ಶವಗಳನ್ನು ಹೂಳುತ್ತಿದ್ದೆವು' ಎಂದು ಹೇಳಿದ್ದಾನೆ.

ಬಾಹುಬಲಿ ಬೆಟ್ಟಗಳಲ್ಲಿ ಸಮಾಧಿ ಮಾಡಲಾದ ಮಹಿಳೆ ಸೇರಿದಂತೆ ನೇತ್ರಾವತಿ ಸ್ನಾನ ಘಟ್ಟದ ಬಳಿ ಸುಮಾರು 70 ಶವಗಳನ್ನು ಹೂತಿರುವುದಾಗಿ ಮುಸುಕುಧಾರಿ ಹೇಳಿಕೊಂಡಿದ್ದಾನೆ. ಅಂತೆಯೇ ಎಸ್ ಐಟಿ ತನಿಖೆ ವೇಳೆ ಗುರುತಿಸಲಾದ Spot 13 ಎಂದು ಕರೆಯಲ್ಪಡುವ ಒಂದು ಸ್ಥಳವನ್ನು ಹೈಲೈಟ್ ಮಾಡಿರುವ ಮುಸುಕುಧಾರಿ, ಇಲ್ಲಿ ಸುಮಾರು 70 ರಿಂದ 80 ಶವಗಳನ್ನು ಹೂಳಲಾಗಿದೆ ಎಂದು ಹೇಳಿದ್ದಾನೆ ಎಂದು ವರದಿಯಾಗಿದೆ.
ಸ್ಥಳೀಯರೂ ನೋಡಿದ್ದಾರೆ

ಇದೇ ವೇಳೆ ಈ ಶವಗಳನ್ನು ಹೂಳುವ ಕಾರ್ಯ ರಹಸ್ಯವಾಗಿಯೇನೂ ಇರುತ್ತಿರಲಿಲ್ಲ. ಹಲವು ಬಾರಿ ಶವ ಹೂಳುವುದನ್ನು ಸ್ಥಳೀಯರು ನೋಡಿದ್ದಾರೆ. ಆದರೆ ಯಾರೂ ಒಮ್ಮೆಯೂ ಮಧ್ಯ ಪ್ರವೇಶಿಸಲಿಲ್ಲ. ಶವ ಹೂಳುವಿಕೆಯಿಂದ ಜನರಿಗೂ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಹೀಗಾಗಿ ಅವರು ಸುಮ್ಮನಿದ್ದರು ಎನಿಸುತ್ತದೆ ಎಂದು ಮುಸುಕುಧಾರಿ ಹೇಳಿದ್ದಾನೆ.

ಸಂಭವನೀಯ ಲೈಂಗಿಕ ದೌರ್ಜನ್ಯ

ಅಂತೆಯೇ ಹೀಗೆ ತಾವು ಹೂಳುತ್ತಿದ್ದ ಶವಗಳ ಸಾವಿನ ಕಾರಣಗಳು ತಿಳಿಯುತ್ತಿರಲಿಲ್ಲವಾದರೂ, ಅನೇಕ ಶವಗಳು ಹಿಂಸೆ ಮತ್ತು ಸಂಭವನೀಯ ಲೈಂಗಿಕ ದೌರ್ಜನ್ಯದ ಗೋಚರ ಗುರುತುಗಳನ್ನು ಹೊಂದಿರುತ್ತಿದ್ದವು. ಕೆಲವು ಶವಗಳು ಸ್ಪಷ್ಟ ಗುರುತುಗಳನ್ನು ಹೊಂದಿದ್ದವು. ಅವರ ಮೇಲೆ ಹಲ್ಲೆ ನಡೆದಂತೆ ಕಾಣುತ್ತಿತ್ತು ಎಂದು ಮುಸುಕುಧಾರಿ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ಶೇ.90ರಷ್ಟು ಮಹಿಳೆಯರ ಶವ

ಶವಗಳು ಮಕ್ಕಳಿಂದ ವೃದ್ಧರವರೆಗೆ ಎಲ್ಲ ವಯಸ್ಸಿನಲ್ಲಿರುತ್ತಿದ್ದವು. 'ಅವರು' ಸಮಾಧಿ ಮಾಡಿ ಎಂದು ಹೇಳುವ ಪ್ರತಿ 100 ಶವಗಳಲ್ಲಿ ಸುಮಾರು 90 ಮಹಿಳೆಯರಿದ್ದಾರೆ ಎಂದು ಮುಸುಕುಧಾರಿ ಹೇಳಿದ್ದಾನೆ.

ಸಮಾಧಿಗಳು ನಾಪತ್ತೆ!

ಇದೇ ವೇಳೆ ಎಸ್ ಐಟಿ ಶೋಧದ ಕುರಿತೂ ಮಾತನಾಡಿರುವ ಮುಸುಕುಧಾರಿ, 'ಮಳೆ, ಮಣ್ಣಿನ ಸವೆತ, ಅರಣ್ಯ ಬೆಳವಣಿಗೆ ಮತ್ತು ನಿರ್ಮಾಣ ಕಾರ್ಯಗಳಿಂದಾಗಿ ಕೆಲವು ಸಮಾಧಿ ಸ್ಥಳಗಳು ವರ್ಷಗಳಲ್ಲಿ ಕಳೆದುಹೋಗಿರಬಹುದು ಎಂದಿದ್ದಾನೆ. ಮೊದಲು ನಾವು ಗುರುತಿಸಬಹುದಾದ ಹಳೆಯ ರಸ್ತೆ ಇತ್ತು. ಆದರೆ ಜೆಸಿಬಿ ಕೆಲಸದ ನಂತರ, ನಾವು ಕೆಲವು ಸ್ಥಳಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಆಗ ಕಾಡು ವಿರಳವಾಗಿತ್ತು; ಈಗ ಅದು ದಟ್ಟವಾಗಿದೆ" ಎಂದು ಹೇಳಿದ್ದಾನೆ.

ಅಂತೆಯೇ ಇಲ್ಲಿಯವರೆಗೆ, ವಿಶೇಷ ತನಿಖಾ ತಂಡ (SIT) ವ್ಯಕ್ತಿ ಗುರುತಿಸಿದ 13 ಸ್ಥಳಗಳಿಂದ ಭಾಗಶಃ ಅಸ್ಥಿಪಂಜರದ ಅವಶೇಷಗಳನ್ನು ವಶಪಡಿಸಿಕೊಂಡಿದೆ. ಅದರಲ್ಲಿ ಒಂದು ಪುರುಷನದ್ದೂ ಸೇರಿದೆ. ಈ ಬಗ್ಗೆ ಕೇಳಿದ ಪ್ರಶ್ನಿಗೆ ಉತ್ತರಿಸಿದ ಮುಸುಕುಧಾರಿ, ಪತ್ತೆಯಾಗಿರುವ ಶವಗಳ ಸಂಖ್ಯೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿದರು. "ಜನರು ತಮಗೆ ಬೇಕಾದುದನ್ನು ಹೇಳಲಿ. ನಾವು ಅವುಗಳನ್ನು ಹೂಳಿದ್ದೇವೆ ಮತ್ತು ನಾವು ಸತ್ಯವನ್ನು ಹೇಳುತ್ತಿದ್ದೇವೆ" ಎಂದರು.
PGK

Post a Comment

Previous Post Next Post