ಲಕ್ನೋ: ಮತಾಂತರಕ್ಕೆ ಛಂಗುರ್ ಬಾಬಾ (Chhangur Baba) ಅಯೋಧ್ಯೆಯಲ್ಲಿ (Ayodhya) ಅತಿ ಹೆಚ್ಚು ಖರ್ಚು ಮಾಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ.
ಧಾರ್ಮಿಕ ಮತಾಂತರದ (Religious Conversion) ಮಾಸ್ಟರ್‌ಮೈಂಡ್ ಬಾಬಾನಿಗೆ ಮುಸ್ಲಿಂ ರಾಷ್ಟ್ರಗಳಿಂದ ಮತಾಂತರಕ್ಕಾಗಿ 500 ಕೋಟಿ ರೂ. ಹಣ ಬರುತ್ತಿತ್ತು. 200 ಕೋಟಿ ರೂ. ಅಧಿಕೃತವಾಗಿ ಬಂದಿದೆ. ಬಾಕಿ 300 ಕೋಟಿ ಹಣ ಅಕ್ರಮ ಹವಾಲಾ ಮೂಲಕ ಬಂದಿದೆ.ಇದರಲ್ಲಿ 200 ಕೋಟಿ ರೂ.ಗಳನ್ನು ಅಧಿಕೃತವಾಗಿ ಮೌಲ್ಯೀಕರಿಸಲಾಗಿದೆ. ಆದರೆ 300 ಕೋಟಿ ರೂ. ಅಕ್ರಮ ಹವಾಲಾ ಮಾರ್ಗಗಳನ್ನು ಬಳಸಿಕೊಂಡು ನೇಪಾಳದ ಮೂಲಕ ರವಾನಿಸಲಾಗಿದೆ. ನೇಪಾಳದ ಗಡಿ ಜಿಲ್ಲೆಗಳಾದ ಕಠ್ಮಂಡು, ನವಲ್ಪರಾಸಿ, ರೂಪಂದೇಹಿ ಮತ್ತು ಬಂಕೆಗಳಲ್ಲಿ 100 ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಈ ಹಣವನ್ನು ಭಾರತದಲ್ಲಿ ಧಾರ್ಮಿಕ ಮತಾಂತರಕ್ಕೆ ಬಳಸಲು ಉದ್ದೇಶಿಸಲಾಗಿತ್ತು ಎಂದು ಆರೋಪಿಸಲಾಗಿದೆ.