ಶಿವಮೊಗ್ಗ | ಭಾರೀ ಮಳೆಗೆ ಮನೆ ಕುಸಿತ: ಶತಾಯುಷಿ ಅಜ್ಜಿ ಮೃತ್ಯು.

*ಪಶ್ಚಿಮ ಘಟ್ಟ ಬಾಯ್ಸ್ ಡೈಲಿ ನ್ಯೂಸ್*
ಶಿವಮೊಗ್ಗ: ಕಳೆದ ರಾತ್ರಿ ಸುರಿದ ಭಾರೀ,
ಮಳೆಯಿಂದಾಗಿ ಮನೆ ಗೋಡೆ ಕುಸಿದು ಬಿದ್ದ ಪರಿಣಾಮ ಶತಾಯುಷಿ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಕುಂಸಿ ಪೊಲೀಸ್‌ ಠಾಣಾ ವ್ಯಾಪ್ತಿಯ ಆಡಗಡಿ ಗ್ರಾಮದಲ್ಲಿ ನಡೆದಿದೆ.
ಆಡಗಡಿ ಗ್ರಾಮದ ಹೇಮಾವತಿ ಎಂಬವರ ಮಣ್ಣಿನ ಕಚ್ಚಾ ಮನೆ ಕುಸಿದಿದೆ. ಇವರ ಮನೆಯಲ್ಲಿದ್ದ ಶತಾಯುಷಿ ಸಿದ್ದಮ್ಮ(100) ಎಂಬವರು ಮೃತಪಟ್ಟಿದ್ದಾರೆ.
ಸಿದ್ದಮ್ಮ ಹೇಮಾವತಿಯವರ ಸಂಬಂಧಿಯಾಗಿದ್ದು ಹೊನ್ನಾಳಿ ತಾಲೂಕಿನ ಕುಂಕೋವ ಗ್ರಾಮದವರಾಗಿದ್ದಾರೆ.
ಘಟನೆಯ ವೇಳೆ ಮನೆಯಲ್ಲಿದ್ದ ಹೇಮಾವತಿಯವರ ಪುತ್ರಿ ಪಲ್ಲವಿ, ಅಳಿಯ ಪರಶುರಾಮ್, ಮೊಮ್ಮಗ ಚೇತನ್( 2) ಇದ್ದು ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಕುಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


PGK

Post a Comment

Previous Post Next Post