ಶಿವಮೊಗ್ಗ | ಮಳೆಗೆ 527 ಕೋಟಿ ರೂ. ವೆಚ್ಚದ ಹೊಸ ರಾಷ್ಟ್ರೀಯ ಹೆದ್ದಾರಿ ಸಾರ್ವಜನಿಕರ ಹಣ ಅವನತಿ.

*ಪಶ್ಚಿಮ ಘಟ್ಟ ವಾಯ್ಸ್ ಡೈಲಿ ನ್ಯೂಸ್*
ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ. ನಾನಾ ಜಿಲ್ಲೆಗಳಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದರೆ, ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ. ಈ ನಡುವೆ, ಒಂದು ತಿಂಗಳ ಹಿಂದೆಯಷ್ಟೇ ಕಾಮಗಾರಿ ಮುಗಿದು, ಉದ್ಘಾಟನೆಗೊಂಡಿದ್ದ ರಾಷ್ಟ್ರೀಯ ಹೆದ್ದಾರಿಯೊಂದು ಮಳೆಯ ಹೊಡೆತಕ್ಕೆ ಬಿರುಕು ಬಿಟ್ಟಿದೆ. ರಸ್ತೆ ಕಾಮಗಾರಿ ಕುರಿತು ಅನುಮಾನಗಳನ್ನು ಹುಟ್ಟುಹಾಕಿದೆ.
ಶಿವಮೊಗ್ಗ ಮತ್ತು ಚಿತ್ರದುರ್ಗ ನಡುವೆ ಸಂಪರ್ಕ ಒದಗಿಸುವ ರಾಷ್ಟ್ರೀಯ ಹೆದ್ದಾರಿ-13ರಲ್ಲಿ ರಸ್ತೆಯು ಮಳೆಯಿಂದಾಗಿ ಬಿರುಕುಬಿಟ್ಟಿದೆ. ಇದು, ಕಳಪೆ ಕಾಮಗಾರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-13ಯ 106 ಕಿ.ಮೀ ರಸ್ತೆಯನ 527 ಕೋಟಿ ರೂ. ವ್ಯಚ್ಛದಲ್ಲಿ ಹೊಸದಾಗಿ ನಿರ್ಮಾ ಮಾಡಲಾಗಿತ್ತು. ಈ ಹೆದ್ದಾರಿಗಾಗಿ ಹೊಳೆಹೊನ್ನೂ ಬಳಿ ಭದ್ರಾ ನದಿಗೆ ಅಡ್ಡಲಾಗಿ ಸೇತುವೆಯನ್ನೂ ನಿರ್ಮಾಣ ಮಾಡಲಾಗಿದೆ. ಹೆದ್ದಾರಿಯನ್ನು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಅವರು ಕಳೆದ ತಿಂಗಳು ಉದ್ಘಾಟಿಸಿದ್ದರು. ಆದರೆ, ಉದ್ಘಾಟನೆಯಾದ ಒಂದೇ ತಿಂಗಳಲ್ಲಿ ರಸ್ತೆ ಬಿರು ಬಿಟ್ಟಿದೆ.
ರಸ್ತೆಯನ್ನು ಕಳಪೆ ಕಾಮಗಾರಿ ನಡೆಸಿ ನಿರ್ಮಾಣ ಮಾಡಲಾಗಿದೆ. ರಸ್ತೆ ಕಾಮಗಾರಿಯ ಗುತ್ತಿಗೆ ಪಡೆದ ಕಂಪನಿ ಮತ್ತು ಎಂಜಿನಿಯ‌ರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಪ್ರತಿಭಟನೆ ನಡೆಸಿದ್ದಾರೆ.

PGK

Post a Comment

Previous Post Next Post