ಬಾಟಲಿಯಲ್ಲಿನ ನೀರಿನಲ್ಲಿ 2,40,000 ಅತೀಸೂಕ್ಷ್ಮಪ್ಲಾಸ್ಟಿಕ್ (ನ್ಯಾನೋಪ್ಲಾಸ್ಟಿಕ್) ಕಣಗಳಿರುತ್ತವೆ! ಹೀಗೆಂದು ಅಮೆರಿಕದ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖ ನದಲ್ಲಿ ಸಂಶೋಧಕರು ತಿಳಿಸಿದ್ದಾರೆ.
ಈ ಹಿಂದೆ ಪ್ಲಾಸ್ಟಿಕ್ ಬಾಟಲಿಯಲ್ಲಿ ಇರುತ್ತವೆ ಎಂದು ಅಂದಾಜಿಸಿದ್ದ ಸೂಕ್ಷ್ಮ ಕಣಗಳಿಗಿಂತ, 100 ಪಟ್ಟು ಹೆಚ್ಚು ಅಪಾ ಯಕಾರಿ ಕಣಗಳು ಒಂದು ಲೀ. ಬಾಟಲಿ ಯಲ್ಲಿ ಇರುವುದನ್ನು ವಿಜ್ಞಾನಿಗಳು ಈಗ ಪತ್ತೆಹಚ್ಚಿದ್ದಾರೆ.
ಈ ನ್ಯಾನೋಪ್ಲಾಸ್ಟಿಕ್ ಗಳು ಮನುಷ್ಯನ ಜೀವಕೋಶಗಳು, ರಕ್ತದಲ್ಲಿ ನುಗ್ಗಿ ಗಂಭೀರ ಅನಾರೋಗ್ಯಗಳಿಗೆ ಕಾರಣ ವಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಮಾತ್ರವಲ್ಲ ಇನ್ನೂ ಗರ್ಭದಲ್ಲೇ ಇರುವ ಮಗುವಿನ ದೇಹ
2.40 ಲಕ್ಷ ನ್ಯಾನೋ ಪ್ಲಾಸ್ಟಿಕ್ ಕಣಗಳಿರುವುದು ಸಂಶೋಧನೆಯಲ್ಲಿ ಪತ್ತೆ.
ದೇಹದೊಳಕ್ಕೂ ಈ ಸೂಕ್ಷ್ಮಕಣಗಳು ಪ್ರವೇಶಿಸಿ ಅನಾರೋಗ್ಯಕ್ಕೆ ಕಾರಣವಾಗುವ ಶಕ್ತಿ ಹೊಂದಿವೆ. ಈ ಹಿಂದೆ ಮೈಕ್ರೋಮೀಟರ್ ಗಾತ್ರದ ಪ್ಲಾಸ್ಟಿಕ್ ಕಣಗಳಿರುವುದನ್ನು ವಿಜ್ಞಾನಿಗಳು ತಿಳಿಸಿದ್ದರು. ಇದೀಗ ಅದಕ್ಕೂ ಸೂಕ್ಷ್ಮವಾದ ನ್ಯಾನೋ ಪ್ಲಾಸ್ಟಿಕ್