ಕಾರವಾರ/ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕುಳಗಿ ವನ್ಯಜೀವಿ ವಲಯ: ವಿದ್ಯುತ್‌ ಶಾಕ್ ತಗುಲಿ ಕಾಡಾನೆ ಸಾವು.

*ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್*
  ಕಾರವಾರ: ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕುಳಗಿ ವನ್ಯಜೀವಿ ವಲಯ ವ್ಯಾಪ್ತಿಯ ಜಮಗಾ ಅರಣ್ಯ ಪ್ರದೇಶದಲ್ಲಿ ವಿದ್ಯುತ್‌ ಶಾಕ್ ತಗುಲಿ ಹೆಣ್ಣು ಕಾಡಾನೆಯೊಂದು ಮೃತಪಟ್ಟಿದೆ.
ಕಾಡಿನಲ್ಲಿ ಮಂಗಳವಾರ ಸಂಜೆ ಅರಣ್ಯ ಸಿಬ್ಬಂದಿ ಗಸ್ತು ತಿರುಗುವ ವೇಳೆ ಮೃತ ಸ್ಥಿತಿಯಲ್ಲಿ ಆನೆ ಪತ್ತೆಯಾಗಿತ್ತು.

'ಆಹಾರ ಅರಸುತ್ತಿದ್ದ ಆನೆಯು ಸಾಗವಾನಿ ಮರವೊಂದನ್ನು ಬಲವಾಗಿ ನೂಕಿರಬಹುದು. ಮರದ ಕೊಂಬೆಯು 220 ಕೆ.ವಿ ವಿದ್ಯುತ್ ತಂತಿಗೆ ಬಡಿದು ಅದರಿಂದ ಶಾಕ್ ತಗುಲಿ ಆನೆ ಮೃತಪಟ್ಟಿರಬಹುದು' ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಬುಧವಾರ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ತಲುಪಿದೆ. ದಾಂಡೇಲಿ ಪಶು ಆಸ್ಪತ್ರೆ ವೈದ್ಯಾಧಿಕಾರಿ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
PGK

Post a Comment

Previous Post Next Post