*ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್*
*ಬೆಳಗಾವಿ* :ಸುವರ್ಣ ವಿಧಾನಸೌಧದಲ್ಲಿ ಇಂದು ಕರ್ನಾಟಕ ವಿಧಾನಮಂಡಳ ಚಳಿಗಾಲ ಅಧಿವೇಶನ ಆರಂಭವಾಯಿತು (ಡಿ.8-19). ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಕ ಸಭೆ ನಡೆದು, ಕಾರ್ಯಕ್ರಮ ಔಪಚಾರಿಕವಾಗಿ ಪ್ರಾರಂಭವಾಯಿತು. ಸಿಎಂ ಸಿದ್ದರಾಮಯ್ಯ ಸಚಿವರೊಂದಿಗೆ ಸಭೆ ನಡೆಸಿ ತಯಾರಿ ಮಾಡಿಕೊಂಡರೆ, ಸ್ಪೀಕರ್ ಯು.ಟಿ. ಖಾದರ್, ವಿಪಕ್ಷ ನಾಯಕ ಆರ್. ಅಶೋಕ್, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಚರ್ಚೆ ನಡೆಸಿದರು.
ಸುವರ್ಣಸೌಧ ಬಣ್ಣಬಣ್ಣದ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, 6,000 ಪೊಲೀಸರ ಭದ್ರತೆಯಲ್ಲಿ ಹೈ ಅಲರ್ಟ್ ಘೋಷಿತವಾಗಿದೆ. ಈ ಬಾರಿ ಒಟ್ಟು 21 ಕೋಟಿ ರೂ. ಖರ್ಚು ನಿಗದಿ ಮಾಡಲಾಗಿದೆ. ಅಧಿವೇಶನದ ಮುಂದಿನ ದಿನಗಳಲ್ಲಿ ಮೆಕ್ಕೆಜೋಳ-ಕಬ್ಬು ಬೆಂಬಲ ಬೆಲೆ, ತುಂಗಭದ್ರಾ ಅಣೆಕಟ್ಟು ಗೇಟ್‌ಗಳು, ಉತ್ತರ ಕರ್ನಾಟಕ ಅಭಿವೃದ್ಧಿ, 21 ವಿಧೇಯಕಗಳು ಪ್ರಮುಖ ಚರ್ಚೆಗೆ ಬರಲಿವೆ. ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಒಕ್ಕೂಟ ಸರ್ಕಾರವನ್ನು ಕಟ್ಟಿಹಾಕಲು ಸಜ್ಜಾಗಿವೆ. ಈ ಮಧ್ಯೆ ರೈತರ ಪ್ರತಿಭಟನೆ ಸಾಧ್ಯತೆಯೂ ನಿರೀಕ್ಷಿತ.