ಶಿವಮೊಗ್ಗದಲ್ಲಿ ಸಾವಯವ ಕೃಷಿ ಸಹ ಸಂಶೋಧನಾ ನಿರ್ದೇಶಕ ಡಾ.ಎಸ್. ಪ್ರದೀಪ್ ಅವರ ಮನೆ ಮತ್ತು ಕಚೇರಿ ಸೇರಿದಂತೆ ಆರು ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ವಿದೇಶಿ ತಳಿಯ ಪಾರಿವಾಳಗಳು, ಹಂಸಗಳು, ಬಾತುಕೋಳಿಗಳು ಮತ್ತು ಕರೆನ್ಸಿಗಳು ಸಹ ಪತ್ತೆಯಾಗಿವೆ. ಈ ಕುರಿತು ಲೋಕಾಯುಕ್ತ ಎಸ್‌ಪಿ ಎಂ.ಎಚ್.ಮಂಜುನಾಥ್ ಚೌದರಿ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.
ಹೈಲೈಟ್ಸ್:
ಶಿವಮೊಗ್ಗದಲ್ಲಿ ಸಾವಯವ ಕೃಷಿ ಸಹ ಸಂಶೋಧನಾ ನಿರ್ದೇಶಕ ಡಾ.ಎಸ್. ಪ್ರದೀಪ್ ಅವರ ಮೇಲೆ ಲೋಕಾಯುಕ್ತ ದಾಳಿ
ಮನೆ, ಕಚೇರಿ ಮತ್ತು ಫಾರಂ ಹೌಸ್ ಸೇರಿ ಆರು ಸ್ಥಳಗಳಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು
66 ಎಕರೆ ಜಮೀನು, ಎರಡೆರಡು ಫಾರ್ಮ್ ಹೌಸ್, 91 ಕುರಿಗಳು ಮತ್ತು 100 ನಾಟಿ ಕೋಳಿ ಸೇರಿ 4 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ
ದಾಳಿಯಲ್ಲಿ 50 ದೇಶಗಳ ಪಾರಿವಾಳಗಳು, 10 ಹಂಸಗಳು ಮತ್ತು 40 ಬಾತುಕೋಳಿ ಸೇರಿ ಭಾರೀ ವ್ಯವಹಾರಗಳು ಪತ್ತೆ
ಶಿವಮೊಗ್ಗ, ಬೆಂಗಳೂರಿನಲ್ಲಿ ಒಂದೊಂದು ನಿವೇಶನ, ಭದ್ರಾಪುರದಲ್ಲಿ 56 ಎಕರೆ ಜಮೀನು, ಒಂದು ಫಾರ್ಮ್ ಹೌಸ್, ಹೊಸನಗರ ತಾಲೂಕಿನಲ್ಲಿ ಹತ್ತೂವರೆ ಎಕರೆ ಭೂಮಿ, ಫಾರ್ಮ್ ಹೌಸ್, 91 ಕುರಿಗಳು, 100 ನಾಟಿ ಕೋಳಿಗಳಿರುವ ಫಾರಂ, 10 - 12 ಹಸುಗಳು, 2 ಕಾರು, 3 ದ್ವಿಚಕ್ರ ವಾಹನ, 1 ಟ್ರ್ಯಾಕ್ಟರ್‌ಗಳಿವೆ.