PGK NEWS ಶಿವಮೊಗ್ಗ: ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಶಿವಮೊಗ್ಗ ನ್ಯಾಯಾಲಯಕ್ಕೆ ಪೊಲೀಸರು ಇಂದು ಹಾಜರು ಪಡಿಸಿದರು.
ಶಿವಮೊಗ್ಗದಲ್ಲಿ ಒಟ್ಟು ಐದು ಕೇಸುಗಳನ್ನು ಹೊಂದಿರುವ ನಕ್ಸಲ್ ನಾಯಕ ಕೃಷ್ಣಮೂರ್ತಿಯನ್ನು ಮಂಗಳವಾರ ರಾತ್ರಿ ಕೇರಳದಿಂದ ಶಿವಮೊಗ್ಗಕ್ಕೆ ಕರೆ ತಂದಿರುವ ಪೊಲೀಸರು ಇಂದು ಶಿವಮೊಗ್ಗ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ತೀರ್ಥಹಳ್ಳಿಯ ಎರಡು ಕೇಸುಗಳು, ಆಗುಂಬೆಯ ಮೂರು ಕೇಸುಗಳ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ. ಇಂದು ಮೂರು ಕೇಸುಗಳ ವಿಚಾರಣೆ ನಡೆಯಲಿದೆ.ನಕ್ಸಲ್ ಕೃಷ್ಣಮೂರ್ತಿಯನ್ನು 2021ರ ನವೆಂಬರ್ ನಲ್ಲಿ ಕೇರಳ ಪೊಲೀಸರು ಬಂಧಿಸಿದ್ದರು. ಕೇರಳದ ತ್ರಿಶೂರ್ ಜಿಲ್ಲೆಯ ವಿಯೂರ್ ನ ಜೈಲಿನಲ್ಲಿ ಬಂಧಿಯಾಗಿರುವ ಕೃಷ್ಣಮೂರ್ತಿ ನಕ್ಸಲ್ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿಕೊಂಡಿದ್ದ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ನೆಮ್ಮಾರು ಸಮೀಪದ ಬುಕ್ಕಡಿಬೈಲ್ ನಿವಾಸಿಯಾಗಿದ್ದ ಕೃಷ್ಣಮೂರ್ತಿ ನಕ್ಸಲ್ ನಾಯಕ ಸಾಕೇತ್ ರಾಜನ್ ಬಳಿಕ ನಕ್ಸಲ್ ನಾಯಕತ್ವ ವಹಿಸಿಕೊಂಡಿದ್ದ. ಕೇರಳ ಹಾಗೂ ಆಂಧ್ರದಲ್ಲಿ ಸಕ್ರಿಯ ಕಾರ್ಯಾಚರಣೆ ನಡೆಸುತ್ತಿದ್ದ.
ಮಾವೋವಾದಿ ನಕ್ಸಲರ ಪ್ರಮುಖ ನಾಯಕನಾಗಿರುವ ಬಿ.ಜಿ.ಕೃಷ್ಣಮೂರ್ತಿಯನ್ನು ಶಿವಮೊಗ್ಗದ ಕೋರ್ಟ್ ಗೆ ಹಾಜರು ಪಡಿಸಲು ಪೊಲೀಸರು ಕರೆತರುತ್ತಿದ್ದು, ಬುಧವಾರ ಬೆಳಗ್ಗೆ 10 ಗಂಟೆಗೆ ಶಿವಮೊಗ್ಗ ಜಿಲ್ಲಾ ಸತ್ರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ. ತೀರ್ಥಹಳ್ಳಿ ಠಾಣೆಯ 2 , ಆಗುಂಬೆ ಠಾಣೆಯ 3 ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿರುವ ಬಿ.ಜಿ.ಕೃಷ್ಣಮೂರ್ತಿ ಚಿಕ್ಕಮಗಳೂರು ಜಿಲ್ಲೆಯ ನೆಮ್ಮಾರು ಬುಕ್ಕಡಿಬೈಲ್ ಗ್ರಾಮದವನು.
ಭಾರೀ ಭದ್ರತೆಯ ಮೂಲಕ ಮೂಲಕ ಕೇರಳದಿಂದ ಶಿವಮೊಗ್ಗಕ್ಕೆ ಕರೆತರಲಾಗುತ್ತಿದ್ದು, ಮಂಗಳವಾರ ರಾತ್ರಿ ವೇಳೆಗೆ ಶಿವಮೊಗ್ಗದ ಜೈಲಿಗೆ ತಲುಪಲಿದ್ದಾರೆ ಎಂದು ವರದಿಯಾಗಿದೆ.
ಸಾಕೇತ್ ರಾಜನ್ ಬಳಿಕ ನಕ್ಸಲ್ ನಾಯಕನಾಗಿ ಗುರುತಿಸಿಕೊಂಡಿದ್ದ ಬಿ.ಜಿ.ಕೃಷ್ಣಮೂರ್ತಿಯನ್ನು 2021ರ ನವೆಂಬರ್‌ನಲ್ಲಿ ಕೇರಳ ಪೊಲೀಸರು ಬಂಧಿಸಿದ್ದರು.
.webp)
