(ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್) ಉತ್ತರಕನ್ನಡ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸದಾ ನಾನು ಸಿದ್ಧ.ಮಂಕಾಳ ಎಸ್‌ ವೈದ್ಯ!

(ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್)

 ನಮ್ಮ ಜಿಲ್ಲೆಯ ಬಹು ದಿನದ ಬೇಡಿಕೆಯಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.
100 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯೋಜನೆಗೆ ಮಾನ್ಯ ಮುಖ್ಯಮಂತ್ರಿಗಳು ಶ್ರೀ ಸಿದ್ದರಾಮಯ್ಯರವರು ಹಾಗೂ ಉಪಮುಖ್ಯಮಂತ್ರಿಗಳು ಶ್ರೀ ಡಿಕೆ ಶಿವಕುಮಾರ್ ರವರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಜಿಲ್ಲೆಯ ಆರೋಗ್ಯ ಸೇವೆಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ 200 ಹಾಸಿಗೆಗಳ ಸಾಮರ್ಥ್ಯದ ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ನಮ್ಮ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಸುಮಾರು ₹100 ಕೋಟಿ ಅಂದಾಜು ವೆಚ್ಚದಲ್ಲಿ ಈ ಆಸ್ಪತ್ರೆ ನಿರ್ಮಾಣಗೊಳ್ಳಲಿದ್ದು, ಇದರಿಂದ ನಮ್ಮ ಜಿಲ್ಲೆಯ ಜನರಿಗೆ ಉನ್ನತ ಮಟ್ಟದ ವೈದ್ಯಕೀಯ ಸೇವೆಗಳು ಸ್ಥಳೀಯವಾಗಿಯೇ ಲಭ್ಯವಾಗಲಿವೆ.

ಉತ್ತರ ಕನ್ನಡ ಜಿಲ್ಲೆಯ ಜನರ ದಶಕಗಳ ಬೇಡಿಕೆಗೆ ಸ್ಪಂದಿಸಿರುವ ನಮ್ಮ ಸರ್ಕಾರ ಮತ್ತೊಮ್ಮೆ ನುಡಿದಂತೆ ನಡೆಯುವ ಸರ್ಕಾರ ಎಂದು ಸಾಬೀತುಪಡಿಸಿದೆ. 

ನಾನು ಚುನಾವಣೆಗೆ ಹೋಗುವ ಮುನ್ನ ನನ್ನ ಅತ್ಯಂತ ದೊಡ್ಡ ಭರವಸೆಗಳಲ್ಲಿ ನಮ್ಮ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತರಬೇಕೆನ್ನುವುದು ನನ್ನ ಮೊದಲ ಗುರಿಯಾಗಿತ್ತು. ಸತತವಾಗಿ ವೈದ್ಯಕೀಯ ಸಚಿವರು ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳೊಂದಿಗೆ ನಮ್ಮ ಜಿಲ್ಲೆಯ ಶಾಸಕರು ಗಳೊಂದಿಗೆ ಚರ್ಚಿಸಿ ಬಜೆಟ್ ನಲ್ಲಿ ಘೋಷಣೆ ಮಾಡಿಸಿ ಈಗ ಅನುಮೋದನೆ ನಮಗೆ ದೊರೆತಿದೆ.

ನಮ್ಮ ಉತ್ತರ ಕನ್ನಡ ಜಿಲ್ಲೆ ಇನ್ನು ಮುಂದೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹೊಂದಿರುವ ಜಿಲ್ಲೆಯಾಗಲಿದ್ದು ಕ್ಷೇತ್ರದಲ್ಲಿ ಜನಪರವಾಗಿ ಕೆಲಸ ಮಾಡಲು ನಮ್ಮ ಕಾಂಗ್ರೆಸ್ ಸರ್ಕಾರ ಸದಾ ಸಿದ್ಧವಾಗಿರುತ್ತದೆ

ಈ ಹಂತದಲ್ಲಿ ನಮ್ಮ ಮೇಲೆ ಭರವಸೆ ಇಟ್ಟ ಸಾವಿರಾರು ಕಾರ್ಯಕರ್ತರು ಸಾರ್ವಜನಿಕರು ನಮ್ಮ ಪಕ್ಷದ ಬೆಂಬಲಿಗರು ಹಾಗೂ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಹೃತ್ಪೂರ್ವಕವಾದ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ 🙏

ಉತ್ತರಕನ್ನಡ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸದಾ ನಾನು ಸಿದ್ಧ.

ವಿರೋಧಿಗಳು ಸಾವಿರ ಹೇಳಲಿ ಆದರೆ ನಮ್ಮ ಕೆಲಸ ಜನರ ಅಭಿವೃದ್ಧಿಗೆ ನ್ಯಾಯಯುತವಾಗಿ ನಡೆಯುತ್ತಿರುತ್ತದೆ. 

"ಟೀಕೆಗಳು ಸಾಯುತ್ತದೆ ಕೆಲಸಗಳು ಉಳಿಯುತ್ತದೆ"🥰
ವರದಿ :ಪಶ್ಚಿಮಘಟ್ಟ ವಾಯ್ಸ್ 
PGK

Post a Comment

Previous Post Next Post