*ಬೆಂಗಳೂರು*: ಧಾರವಾಡದ ಬಿಜೆಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ (ಯೋಗೇಶ್ ಗೌಡರ್) ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.ಇನ್ನೊeರ್ವ ಆರೋಪಿ ಚನ್ನಕೇಶವ ಟಿಂಗರಿಕರಗೆ ಏಳು ವರ್ಷಗಳ ಸೆರೆವಾಸ ಶಿಕ್ಷೆ ಪ್ರಕಟಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಏಪ್ರಿಲ್ 17ರಂದು ಈ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ. ಅಲ್ಲದೆ ಹತ್ಯೆಗೀಡಾದ ಲೋಕೇಶ್ ಗೌಡರ,ಮಕ್ಕಳಿಗೆ ಹದಿನಾರು ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ಕೋರ್ಟ್ ಆದೇಶಿಸಿದೆ. 2016 ಜೂನ್ 15ರಂದು ಧಾರವಾಡದಲ್ಲಿ ನಡೆದ ಭೀಕರ ಕೊಲೆಗೆ ರಾಜಕೀಯ ವೈರತ್ವ ಮತ್ತು ಭೂ ವಿವಾದ ಕಾರಣವೆಂದು ಸಿಬಿಐ ತನಿಖೆಯಲ್ಲಿ ತಿಳಿದುಬಂದಿತ್ತು. ವಿನಯ್ ಕುಲಕರ್ಣಿ (15ನೇ ಆರೋಪಿ) ಕೊಲೆ ಸಂಚು ರೂಪಿಸಿದ್ದಾರೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣದಲ್ಲಿ ಒಟ್ಟು 17 ಜನರನ್ನು ದೋಷಿಗಳೆಂದು ಘೋಷಿಸಲಾಗಿದ್ದು,16 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಸಿಬಿಐ ಕ್ಷಮಾ ರಹಿತ ಜೀವಾವಧಿ ಕೋರಿತ್ತು. ವಿನಯ್ ಕುಲಕರ್ಣಿ ಕುಟುಂಬದ ಜವಾಬ್ದಾರಿ, ಮೂರು ಮಕ್ಕಳು, ಗೋವು ಪಾಲನೆಯನ್ನು ಉಲ್ಲೇಖಿಸಿ ಕನಿಷ್ಠ ಶಿಕ್ಷೆಗೆ ನಿನ್ನೆ ಮನವಿ ಮಾಡಿಕೊಂಡಿದ್ದರು. ಆದರೆ ನ್ಯಾಯಾಲಯ ಕಠಿಣ ತೀರ್ಪು ನೀಡಿದೆ.
ಈ ಶಿಕ್ಷೆಯಿಂದ ವಿನಯ್ ಕುಲಕರ್ಣಿಯ ಶಾಸಕ ಸ್ಥಾನ ಸ್ವಯಂಚಾಲಿತವಾಗಿ ರದ್ದಾಗಲಿದೆ ಎಂದು ಹೇಳಲಾಗಿದೆ.
ವರದಿ:- ದಾರವಾಡ malikrjuna