ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್* ಚರ್ಚ್ ಹಣ ದುರುಪಯೋಗ ಲೋಕಾಯುಕ್ತಕ್ಕೆ :ಆರು ಜನರ ಮೇಲೆ ದೂರು ದಾಖಲು*

*ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್*

*ಕಾರವಾರ*:ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಕ್ಕೆ ವ್ಯಕ್ತಿ ಒಬ್ಬನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಕಾರವಾರ ಚಿತ್ತಾಕುಲದಿಂದ ವರದಿಯಾಗಿದೆ. ಚರ್ಚನಲ್ಲಿ ಅವ್ಯವಹಾರ ಮಾಡಿ ಹಣ ತಿಂದಿರುವ  ಕುರಿತು ಆಸಿಸ್ @ಸಾವೆರ್ ಮಿನಿನ್ ಫರ್ನಾಂಡಿಸ್  ಸಾ :ಚರ್ಚವಾಡ, ಹಳಗ ತಾ :ಕಾರವಾರ ಇವರು  ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರೆಂದು ಹೇಳಲಾಗಿದೆ. ಇದನ್ನು ಆಕ್ಷೇಪಿಸಿ ದೂರನ್ನು ಹಿಂಪಡೆಯುವಂತೆ ಆಸಿಸ್ ಸಾವೇರ್ ಮಿನಿನ್ ಪರ್ನಾಂಡಿಸ್ ಎಂಬಾತನ ಮೇಲೆ ಮನೆಯ ಬಳಿ ತಂಡ ಕಟ್ಟಿ ಬಂದು ಹಲ್ಲೆ ನಡೆಸಿದ್ದಾಗಿ ತಿಳಿದುಬಂದಿದೆ.ಈ ಕುರಿತಂತೆ ಫುಲ್ಲರ್ ಅಫೋಲಿನ್ ಫರ್ನಾಂಡಿಸ್, ಜೋಸೆಫ್ ಥಾಮಸ್ ಫರ್ನಾಂಡಿಸ್, ಮೆಕ್ಸಿ ಅಪೋಲಿನ್ ಫರ್ನಾಂಡಿಸ್, ವಿಲ್ಸನ್ ಮಾರ್ಷಲ್ ಫರ್ನಾಂಡಿಸ್, ರೋಮಿ ಅಪೋಲಿನ್ ಫರ್ನಾಂಡಿಸ್, ಶ್ರೀಮತಿ ರಿಂಕೊ ಫುಲರ್ ಫರ್ನಾಂಡಿಸ್ ಎಲ್ಲರೂ ಸಾ:ಹಳಗ ಕಾರವಾರ ಇವರುಗಳ ಮೇಲೆ ದೂರು ನೀಡಲಾಗಿದೆ.ದೂರುದಾರ ಆಸಿಸ್ ಫರ್ನಾಂಡಿಸ್ ಸಾಮಾಜಿಕ ಕಾರ್ಯಕರ್ತರಾಗಿದ್ದು ಹಲ್ಲೆಗೊಳಗಾದ ಅವರು ಚಿತ್ತಾಕುಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವರದಿ -ಮಂಜು ಹಗೆರ 

PGK

Post a Comment

Previous Post Next Post