*ಹೊನ್ನಾವರ*:ವಿದ್ಯುತ್ ತಂತಿ ತಗುಲಿ ಇಬ್ಬರು ಮೃತಪಟ್ಟು ಒಬ್ಬ ಗಾಯಗೊಂಡ ದಾರುಣ ಘಟನೆ ಹೊನ್ನಾವರ ತಾಲೂಕು ಮಲ್ಲಾಮಾಸ್ತಿಕೇರಿ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.ಅ.19ರಂದು ದುರಂತ ಸಂಭವಿಸಿದ್ದು ಸೀತು ಸಂತೋಷ ಗೌಡ (43)ಸಂತೋಷ ಗಣಪಯ್ಯ ಗೌಡ (55) ಸ್ಥಳದಲ್ಲಿಯೇ ಮೃತಪಟ್ಟಿದ್ದು,ಇವರ ಮಗ ನಾಗರಾಜ ಗೌಡ ತೀವ್ರವಾಗಿ ಗಾಯಗೊಂಡಿದ್ದಾನೆ.ಮೃತ ಸೀತು ಸಂತೋಷ ಗೌಡ ಮನೆಯ ಹತ್ತಿರ ಇದ್ದ ಹೆಸ್ಕಾಂನ ಮೇನ್ ಕರೆಂಟ್ ಲೈನ್ ತುಂಡಾಗಿ ಬೀಳುವ ಅಪಾಯಕಾರಿ ಸ್ಥಿತಿಯಲ್ಲಿದ್ದು ಅದನ್ನು ಆ ಭಾಗದ ಗ್ರಾಮ ಪಂಚಾಯತ ಸದಸ್ಯ ಚಂದ್ರಹಾಸ ಗೌಡ ಮೂರು ತಿಂಗಳಿಂದ ಹೆಸ್ಕಾಂನ ಗಮನ ಸೆಳೆದರೂ ಸರಿಪಡಿಸಿರಲಿಲ್ಲ ಎನ್ನಲಾಗಿದೆ.ಈ ನಡುವೆ ಅ.19ರಂದು ಹರಿದ ವಿದ್ಯುತ್ ತಗುಲಿ ಇಬ್ಬರು ಮೃತಪಟ್ಟಿದ್ದಾರೆಂದು ಹೇಳಲಾಗಿದೆ.ಈ ಮಧ್ಯೆ ಘಟನೆ ನಡೆದ ತಕ್ಷಣ ಕಾಸರಗೋಡು ಗ್ರಿಡ್ ಗೆ ಹಲವಾರು ಬಾರಿ ದೂರವಾಣಿ ಕರೆ ಮಾಡಿದರೂ ಅಲ್ಲಿಯ ಸಿಬ್ಬಂದಿ ಕರೆ ಸ್ವೀಕರಿಸದೆ ನಿರ್ಲಕ್ಷತನ ತೋರಿದ್ದಾರೆ ಎಂದು ತಿಳಿದುಬಂದಿದೆ.ಈ ಕುರಿತಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಮೃತರ ಸಂಬಂಧಿ ಸುಬ್ರಾಯ ಗೌಡ ದೂರು ನೀಡಿದ್ದು ಹೆಸ್ಕಾಂ ನಿರ್ಲಕ್ಷದ ಬಗ್ಗೆ ಕಾಸರಗೋಡು ಲೈನ್ ಮ್ಯಾನ್ ಅಶೋಕ, ಸೆಕ್ಷನ್ ಆಫೀಸರ್ ಪ್ರಸಾದ್,ಹೊನ್ನಾವರ ಹೆಸ್ಕಾಂ ಎಇಇ ರಾಮಕೃಷ್ಣ ಭಟ್ ಹಾಗೂ ಗ್ರಿಡ್ ಸಿಬ್ಬಂದಿ ಮೇಲೆ ಪ್ರಕರಣ ದಾಖಲಾಗಿದೆ.