*ಪಶಿಮಘಟ್ಟ ವಾಯ್ಸ್ ಡೈಲಿ ನ್ಯೂಸ್* ಹಾವೇರಿ: ಕೇಂದ್ರ ಸ್ಥಾನದಲ್ಲಿ ಇರದಿದ್ದಕ್ಕೆ ಪಿಡಿಒ ಅಮಾನತು.

*ಪಶಿಮಘಟ್ಟ ವಾಯ್ಸ್ ಡೈಲಿ ನ್ಯೂಸ್* ಹಾವೇರಿ: ಕೇಂದ್ರ ಸ್ಥಾನದಲ್ಲಿ ಇರದಿದ್ದಕ್ಕೆ ಜಿಲ್ಲೆಯ ಮೆಲ್ಲೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರವಿಕುಮಾರ ಎಚ್‌. ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ರಾಹುತನಕಟ್ಟಿಯ ಕಾಯಂ ಪಿಡಿಒ ಆಗಿದ್ದ ರವಿಕುಮಾರ ಅವರಿಗೆ, ಮೆಲ್ಲೇರಿ ಗ್ರಾಮ ಪಂಚಾಯಿತಿಯ ಪ್ರಭಾರ ಹೊಣೆ ವಹಿಸಲಾಗಿತ್ತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ರುಚಿ ಬಿಂದಲ್ ಅವರು ಇತ್ತೀಚೆಗೆ ಮೆಲ್ಲೇರಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ್ದರು. ಆದರೆ, ಅಲ್ಲಿ ಪಿಡಿಒ ಹಾಜರಿರಲಿಲ್ಲ. ರಾಹುತನಕಟ್ಟಿ ಗ್ರಾಮ ಪಂಚಾಯಿತಿಯಲ್ಲಿ ವಿಚಾರಿಸಿದಾಗ, ಅಲ್ಲಿಯೂ ಪಿಡಿಒ ಇರಲಿಲ್ಲ.
ಕೇಂದ್ರ ಸ್ಥಾನದಲ್ಲಿರದೇ ಕರ್ತವ್ಯ ಲೋಪ ಎಸಗಿದ್ದಕ್ಕಾಗಿ ಪಿಡಿಒ ರವಿಕುಮಾರ ಅವರನ್ನು ಅಮಾನತುಗೊಳಿಸಿ ಸಿಇಒ ರುಚಿ ಅವರು ಆದೇಶ ಹೊರಡಿಸಿದ್ದಾರೆ.
PGK

Post a Comment

Previous Post Next Post